ಮೈಸೂರು, ಸೆಪ್ಟಂಬರ್,16,2020(www.justkannada.in): ಚಿರತೆ ದಾಳಿಗೆ ಸಿಲುಕಿ 3ವರ್ಷದ ಗಂಡು ಕರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೇಶವಮೂರ್ತಿ ಎಂಬುವವರಿಗೆ ಸೇರಿದ ಮನೆಯ ಕೊಟ್ಟೆಗೆಗೆ ದಾಳಿ ನಡೆಸಿದ ಚಿರತೆ ಕೊಟ್ಟಿಗೆಯಲ್ಲಿದ್ದ ಕರುವನ್ನ ಕೊಂದಿದೆ. ಇನ್ನು ದಾಳಿ ನಡೆಸಿದ್ದ ಚಿರತೆ ಅನೇಕ ಬಾರಿ ಗ್ರಾಮಕ್ಕೆ ಬಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿಂದೆಯೂ ಚಿರತೆ ಸಾಕು ಪ್ರಾಣಿಗಳನ್ನ ಕೊಂದು ಹಾಕಿದೆ.
ಹೀಗಾಗಿ ಬೋನಿರಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖಾ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Key words: leopard -killed – calf – Anxiety –villagers-mysore