ನೀರಿಕ್ಷೆಗೆ ತಕ್ಕ ಫಲಿತಾಂಶ ಬಂದಿದೆ: ಎಲ್ಲರ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇನೆ- ಯದುವೀರ್ ಸಂತಸ.

ಮೈಸೂರು,ಜೂನ್,4,2024 (www.justkannada.in):  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದಕ್ಕೆ ಬಿಜೆಪಿ ಅಭ್ಯರ್ಥಿ ಯಧುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಯದುವೀರ್,  ಇದು ನನ್ನ ಗೆಲುವಲ್ಲ. ಇದು ಮೈತ್ರಿ ಪಕ್ಷದ ಗೆಲುವು. ಚಾಮುಂಡಿ ತಾಯಿ ಮತ್ತು ಕಾವೇರಮ್ಮನ್ನ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ. ನಮ್ಮ ನೀರಿಕ್ಷೆಗೆ ತಕ್ಕ ಫಲಿತಾಂಶ ಬಂದಿದೆ. ಸಿಎಂ ಬಹಳ ಕಠಿಣವಾದ ಸವಾಲನ್ನೇ ಒಡ್ಡಿದ್ದರು. ನಾವು ಇವತ್ತು ಅದನ್ನ ಎದುರಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಿಎಂ ಹಾದಿಯಾಗಿ ಎಲ್ಲರ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇನೆ ಎಂದರು.

ಮೈಸೂರು ಕೊಡಗಿನ ಜನ ಜಾತಿಯನ್ನ ನೋಡದೆ ಭಾರತೀಯರು ಎಂಬ ಮನೋಭಾವದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ನಾವು ಎಲ್ಲೂ ಜಾತಿ ಮತ್ತೊಂದು ವಿಚಾರವನ್ನ ಬಳಸಲಿಲ್ಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನ ಗೆದ್ದಿಲ್ಲ ನಿಜ. ಆದರೂ ಮೈತ್ರಿ ಪಕ್ಷಗಳೊಂದಿಗೆ ಸೇರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು  ನೂತನ ಸಂಸದ ಯದುವೀರ್  ವಿಶ್ವಾಸ ವ್ಯಕ್ತಪಡಿಸಿದರು.

Key words: lokasabha, election, mysore, kodagu, bjp-Yaduveer