ಮೈಸೂರು, ನವೆಂಬರ್, 24, 2019 (www.justkannada.in): ಮೈಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿ ಮೂರ್ತಿಗೆ ಇಂದು 70ನೇ ವರ್ಷದ ಮಹಾ ಮಸ್ತಕಾಭಿಷೇಕ ಸಂಭ್ರಮದಿಂದ ನೆರವೇರಿದೆ.
ಮೈಸೂರು ಜಿಲ್ಲೆಯಿಂದ ಸುಮಾರು 22 ಕಿಲೋಲೋಮೀಟರ್ ದೂರದ ಬೆಟ್ಟದೂರು ಗ್ರಾಮದಲ್ಲಿರುವ ಗೊಮ್ಮಟಗಿರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನಮಠದ ಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಾಹಾಮಸ್ತಕಾಭಿಷೇಕ ನೆರವೇರಿಸಲಾಯಿತು.
ಜಲಾಭಿಷೇಕ, ಎಳೆನೀರು, ಕ್ಷೀರ, ಅಷ್ಟಗಂಧ, ಅರಿಶಿಣ, ಕೇಸರಿ, ಶ್ರೀಗಂಧ, ಚಂದನ ಸೇರಿದಂತೆ ವಿವಿಧ ಬಗೆಯ ದ್ರವ್ಯಗಳ ಅಭಿಷೇಕ ಹಾಗೂ ಪುಷ್ಪಾರ್ಚನೆ ಮಾಡಲಾಯಿತು. ಈ ಬಾರಿ ಕೊಕ್ಕರೆ ಬೆಳ್ಳೂರು ಬಳಿಯ ಹಾರತಿಪುರದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಜೈನ ಪೀಠದ ಡಾ.ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮಿಗಳ ಕ್ಷೇತ್ರ ಪ್ರವೇಶ ಮಾಡಿದರು.
ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಆಹ್ವಾನವಿಲ್ಲ ಇರಲಿಲ್ಲ. ಬದಲಿಗೆ ಗೊಮ್ಮಟ ಗಿರಿಯ ದಿಗಂಬರ ಜೈನಮಠದ ಅಧ್ಯಕ್ಷ ಎಂ.ಆರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮಗಳು.