ಬೆಂಗಳೂರು,ಫೆ,10,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಜತೆ ಮಾತನಾಡಿದ್ದೇ ಬೇರೆ. ಆದರೆ ನನಗೆ ಕೊಟ್ಟಿರುವುದೇ ಬೇರೆ. ಈ ಬಗ್ಗೆ ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚಿಸುವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
10 ಮಂದಿ ನೂತನ ಸಚಿವರಿಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದು, ಸಚಿವ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ನಾನು ಸಿಎಂ ಬಳಿ ಬೇರೆಯೇ ಮಾತನಾಡಿದ್ದೆ. ನನಗೆ ವೈದ್ಯಕೀಯ ಖಾತೆ ಎಂದು ನಿಮ್ಮಿಂದ ಗೊತ್ತಾಗಿದೆ. ಆದರೆ ನಾನು ಮಾತನಾಡಿದ್ದೇ ಬೇರೆ .ಈ ಬಗ್ಗೆ ಬಹಿರಂಗವಾಗಿ ಮಾತನಾಡಿ ಮುಜುಗರ ತರಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಚರ್ಚಿಸುತ್ತೇನೆ ಎಂದರು.
ಇಲಾಖೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಇಲಾಖೆ ನೀಲಿ ನಕ್ಷೆ ಸಿದ್ದಪಡಿಸಿ ಬಳಿಕ ಮಾತನಾಡುವೆ ಎಂದು ಸಚಿವ ಸುಧಾಕರ್ ತಿಳಿಸಿದರು.
ತಮ್ಮ ಹಾಗೂ ಎಂಟಿಬಿ ನಾಗರಾಜ್ ನಡುವಿನ ಮನಸ್ತಾಪ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಮತ್ತು ಎಂಟಿಬಿ ನಾಗರಾಜ್ ಅವರ ಸಂಬಂಧ ಎಂದಿಗೂ ಬದಲಾಗುವುದಿಲ್ಲ. ಎಂಟಿಬಿ ನಾಗರಾಜ್ ಗೆ ಸಚಿವ ಸ್ಥಾನ ಸಿಗುವವರೆಗೆ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ತೀರ್ಮಾನಿಸಿದ್ದವು. ಆದರೆ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದ ಹಿನ್ನೆಲೆ ಪ್ರಮಾಣ ವಚನ ಸ್ವೀಕರಿಸಿದವು ಎಂದು ಸ್ಪಷ್ಟನೆ ನೀಡಿದರು.
Key words: Medical Education department -Minister -Dr. Sudhakar-cm bs yeddyurappa