ಬೆಂಗಳೂರು, ಮೇ 11, 2020 (www.justkannada.in): ಭಾರತೀಯ ರೈಲ್ವೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ತವರು ರಾಜ್ಯಕ್ಕೆ ಮರಳಲು ಅನುಕೂಲವಾಗುವಂತೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಭಾನುವಾರ ಒಂದೇ ದಿನ ಕರ್ನಾಟಕದಿಂದ 6 ವಿಶೇಷ ರೈಲುಗಳು ಸಂಚಾರ ನಡೆಸಿವೆ.
ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರು ಭಾನುವಾರ ಒಂದೇ ದಿನ ಸಂಚಾರ ನಡೆಸಿದ್ದಾರೆ. ರಾಜ್ಯದಿಂದ ಪ್ರಯಾಣ ಮಾಡಿದವರ ಸಂಖ್ಯೆ 7353.
ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.