ಕಲ್ಬರ್ಗಿ,ಏಪ್ರಿಲ್,15,2024 (www.justkannada.in): ಲೋಕಸಭೆ ಚುನಾವಣೆ ಹಿನ್ನೆಲೆ ನಿನ್ನೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಪ್ರಣಾಳಿಕೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ಏನು ಕೊಡುಗೆ ಕೊಡುತ್ತೇವೆ ಅನ್ನೋದು ಇಲ್ಲ. ಕಳೆದ ಪ್ರಣಾಳಿಕೆಯಲ್ಲಿ ಮೈಸೂರನ್ನ ಪ್ಯಾರೀಸ್ ಮಾಡ್ತೀವಿ. ಆನೇಗುಂದಿ ಅಂಜನಾದ್ರಿ ಬೆಟ್ಟ ಅಭಿವೃದ್ದಿ ಎಂದದ್ರು ಈ ವಿಚಾರಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಬಿಜೆಪಿಯವರ ಪ್ರಕಾರವೇ ದೇಶದಲ್ಲಿ 30 ಲಕ್ಷ ಹುದ್ದೆ ಖಾಲಿ ಇವೆ. ಇದರ ಬಗ್ಗೆ ಮಾತನಾಡಲು ಮೋದಿ ನೇತೃತ್ವದ ಸರ್ಕಾರ ತಯಾರಿ ಇಲ್ಲ. ಸರ್ಕಾರಿ ಉದ್ಯೋಗದ ಭರ್ತಿ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
Key words: Minister -Priyank Kharge –BJP- manifesto