ಚುನಾವಣೆ ವೇಳೆ ಕೆಲಸ ಮಾಡದ ಆರೋಪ: ಶಾಸಕ ಲಕ್ಷ್ಮಣ್ ಸವದಿ ವಿರುದ್ದ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ.

ಬೆಳಗಾವಿ,ಜೂನ್,7,2024 (www.justkannada.in): ಲೋಕಸಭೆ ಚುನಾವಣೆ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು ಚಿಕ್ಕೋಡಿ ಕ್ಷೇತ್ರದ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಆದರೂ ಸಹ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಮತ್ತು ಮಹೇಂದ್ರ ತಮ್ಮಣ್ಣನವರ್ ವಿರುದ್ದ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕುಡುಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ.  ಕುಡುಚಿ ವಿಧಾನಸಭಾ  ಕ್ಷೇತ್ರದಲ್ಲಿ ಎರಡು ದಿನ ಇದ್ದೆ.  ಆದರೆ ಮಹೇಂದ್ರ ತಮ್ಮಣ್ಣನವರ ಕೈಗೆ ಸಿಗಲಿಲ್ಲ.  ಅಥಣಿಯಲ್ಲೂ ಹಾಗೇ ಆಯಿತು.  ಯಾರ ಬಗ್ಗೆಯೂ ಪಕ್ಷದ ವರಿಷ್ಠರಿಗೆ ದೂರು ನೀಡಲ್ಲ ಪಕ್ಷದ ವಿರುದ್ದ ಕೆಲಸ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಬೇಕಿತ್ತು. ಅದನ್ನು ಜನರಿಗೆ ಹೇಳುವ  ಕೆಲಸ ಮಾಡಿರುವೆ ಎಂದರು.

ಅಥಣಿಯಲ್ಲಿ ಲೀಡ್ ಆಗುತ್ತೆ ಅಂದುಕೊಂಡಿದ್ದೆ. ಆದರೆ ಅಥಣಿಯಲ್ಲಿ ಲೀಡ್ ಬಂದಿಲ್ಲ.  ಪ್ರಕಾಶ್ ಹುಕ್ಕೇರಿ ಸೇರಿ ಇನ್ನುಳಿದ ನಾಯಕರು ಕೆಲಸ ಮಾಡಿದ್ದಾರೆ.  ನನ್ನ ಪುತ್ರಿಯ ಗೆಲುವಿಗೆ ಕೆಲಸ ಮಾಡಿದ್ದಾರೆ ಬೇರೆ ಕ್ಷೇತ್ರಗಳಲ್ಳೂ ಮುಖಂಡರು ಪಕ್ಷದ ಪರ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

Key words: Minister, Satish Jarakiholi, MLA, Lakshman Savadi