ವಿಜಯಪುರ, ಮಾರ್ಚ್, 4,2024(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 50 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬಸಗನೌಡ ಪಾಟೀಲ್ ಯತ್ನಾಳ್, ಈ ಸರ್ಕಾರದಲ್ಲಿ 50% ಭ್ರಷ್ಟಾಚಾರ ನಡೆಯುತ್ತಿದೆ. ಶೇ.13ರಷ್ಟು ಕಮಿಷನ್ ಇಲ್ಲದೆ ಗುತ್ತಿಗೆದಾರರಿಗೆ ಎನ್ಒಸಿ ನೀಡುತ್ತಿಲ್ಲ. ಎಲ್ಲವೂ ಸೇರಿದರೆ ಶೇಕಡಾ 50ರಷ್ಟು ಕಮಿಷನ್ ಗೆ ಬಂದು ನಿಲ್ಲುತ್ತದೆ. ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿದ್ದರು. ಆದರೆ ಇವರು 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ವಿಜಯಪುರ ಲೋಕಸಭಾ ಚುನಾವಣೆ ಟಿಕೆಟ್ ಯಾರಿಗೆ ನೀಡಿದರೂ ನಾವು ಕೆಲಸ ಮಾಡುತ್ತೇವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡೋದು ನಮ್ಮ ಗುರಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
Key words: MLA –Basanagowda patil Yatnal- accused – Congress government -50 percent commission.