ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ರು- ಶಾಸಕ ಜನಾರ್ಧನ ರೆಡ್ಡಿ.

ಕೊಪ್ಪಳ, ಮೇ, 1,2024 (www.justkannada.in): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು ಎಂದು ಶಾಸಕ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.

ಇಂದು ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ನಾನು ಕೆಆರ್​ಪಿಪಿ ಪಕ್ಷ ಕಟ್ಟಿದಾಗ ಹತ್ತು ಸ್ಥಾನ ನಮ್ಮ ಪಕ್ಷ ಗೆಲ್ಲುತ್ತೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದರು. ಮುಂದೆ ನಮ್ಮ ಸರ್ಕಾರ ರಚನೆಗೆ ರೆಡ್ಡಿ ಬೇಕಾಗಬಹುದು ಎಂದು ಸಂಧಾನ ಮಾಡಿಕೊಂಡಿದ್ದರು. ಚುನಾವಣೆ ಮುನ್ನ ಇಬ್ಬರಿಗೂ ಬೇಕಾಗಿದ್ದ ಓರ್ವ ಕಾಮನ್ ಫ್ರೆಂಡ್ ನನ್ನು ಕಳುಹಿಸಿದ್ದರು. ನಾನು ರೆಡ್ಡಿ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿದ್ದೇನೆ.  ಹಳೆಯದೆಲ್ಲವನ್ನು ಮರೆತು ಬಿಡೋಣ, ನಾನು ಗಂಗಾವತಿಗೆ ಹೋಗಿ ಪ್ರಚಾರ ಮಾಡಲ್ಲ. ರೆಡ್ಡಿ ಬಗ್ಗೆ ಎಲ್ಲಿಯೂ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಹೇಳಿ ಕಳುಹಿಸಿದ್ದರು.

ಹೀಗಾಗಿಯೇ ಸಿದ್ದರಾಮಯ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿ ನಗರಕ್ಕೆ ಪ್ರಚಾರಕ್ಕೆ ಬಂದಿರಲಿಲ್ಲ. ಇಕ್ಬಾಲ್ ಅನ್ಸಾರಿ ಮೆಚ್ಚಿಸಲು ಎರಡು ಮಾತನಾಡಿದ್ದರು ಅಷ್ಟೆ  ಎಂದು ಜನಾರ್ಧನರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

Key words: MLA, Janardhan Reddy, alliance, Siddaramaiah