ಮೈಸೂರು,ಆಗಸ್ಟ್,22,2024 (www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಾಸಕ ಶ್ರೀವತ್ಸ ಜಿ-ಕ್ಯಾಟಗರಿ ಸೈಟ್ ಪಡೆಡಿದ್ದಾರೆ. ಈ ಬಗ್ಗೆಅವರು ಸ್ಪಷ್ಟನೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಜಿ – ಕ್ಯಾಟಗರಿ ಸೈಟ್ ಪಡೆಯಬೇಕಾದರೆ ಸಂವಿಧಾನಿಕ ಹುದ್ದೆಯಲ್ಲಿರಬೇಕು. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಶಾಸಕ ಶ್ರೀವತ್ಸ ಜಿ-ಕ್ಯಾಟಗರಿ ಸೈಟ್ ಪಡೆಡಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತ ಹೇಗೆ ಸೈಟ್ ಪಡೆಯಲು ಸಾಧ್ಯ ಸ್ಪಷ್ಟನೆ ನೀಡಲಿ. ಯಡಿಯೂರಪ್ಪ ಎರಡನೇ ಬಾರಿ ಸಿಎಂ ಆಗಿದ್ದಾಗ ಶ್ರೀವತ್ಸ ಮೂಡ ಸೈಟ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರೇ ನಮಗೆ ಮಾಹಿತಿ ನೀಡಿದ್ದಾರೆ. ಶ್ರೀವತ್ಸ ಲಾಟರಿ ಹೊಡೆದಂಗೆ ಎಂ ಎಲ್ ಎ ಆಗಿಬಿಟ್ಟಿದ್ದಾರೆ . ಅವರು ಮಾತ್ರ ಸಿದ್ದರಾಮಯ್ಯ, ಕಾಂಗ್ರೆಸ್ಸಿಗರನ್ನ ಬೈಯ್ಯಬಹುದಾ? ಸಿದ್ದರಾಮಯ್ಯ ವಿರುದ್ಧ ಮಾತನಾಡಿದಾಗ ನಾವು ಸುಮ್ಮನೆ ಕುರಬೇಕಾ? ಎಂದು ವಾಗ್ದಾಳಿ ನಡೆಸಿದರು.
ಐಮ್ ನಾಟ್ ಎ ಸೆಲ್ಫ್ ಸ್ಟೈಲ್ ಪೊಲಿಟಿಷಿಯನ್: ನಾವು ಸಹ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ
ನನಗೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ. ಡಿಫರ್ಮೇಷನ್ ಕೇಸ್ ಅನ್ನೇ ಎದುರಿಸುತ್ತೇನೆ, ಇನ್ನೂ ನೋಟೀಸ್ ಗೆ ಹೆದರುತ್ತಿನಾ? ಐಮ್ ನಾಟ್ ಎ ಸೆಲ್ಫ್ ಸ್ಟೈಲ್ ಪೊಲಿಟಿಷಿಯನ್. ನಾನು ರಾಷ್ಟ್ರೀಯ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ. ಸ್ಪೋಕ್ ಪರ್ಸನ್ ಕೆಲಸ ನಮ್ಮ ಮೇಲೆ ಆರೋಪ ಬಂದಾಗ ಮಾತನಾಡುವುದೇ ನಮ್ಮ ಕೆಲಸ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದ್ರು ಸುಮ್ಮನಿರಬೇಕಾ? ನಿಮ್ಮ ಮಾತಿಗೆ ಕೌಂಟರ್ ಕೊಟ್ಟಿದ್ದೀವಿ. ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ. ನೀವು ಮಾತನಾಡಿರುವ ಬಗ್ಗೆ ನಾವು ಸಹ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಶ್ರೀವತ್ಸ ಸೈಟ್ ಪಡೆದಿರುವ ಬಗ್ಗೆ ದಾಖಲೆ ಸಂಗ್ರಹಿಸುತ್ತಿದ್ದೇವೆ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.
ವೈಟ್ನರ್ ಆರೋಪಕ್ಕೆ ತಿರುಗೇಟು.
ಆಟಿಐ ಕಾರ್ಯಕರ್ತರು ಸಿಎಂ ವಿರುದ್ಧದ ಮೊತ್ತೊಂದಷ್ಟು ದಾಖಲೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ ಅವರು, ಸಿಎಂ ಧರ್ಮಪತ್ನಿ 2014 ರಲ್ಲಿ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಪ್ರಾಧಿಕಾರ ಸೂಕ್ತ ಬದಲಿ ನಿವೇಶನ ಕೊಡುವಂತೆ ಕೋರಿದ್ದಾರೆ. ವೈಟ್ನರ್ ಹಾಕಿರುವುದರ ಕುರಿತು ಬಿಜೆಪಿ ಜೆಡಿಎಸ್ ನವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ವೈಟ್ನರ್ ಹಿಂದೆ ಏನಿದೆ ಅಂತ ಮೊದಲು ಸೂಕ್ಷ್ಮವಾಗಿ ನೋಡಿ. ದೇವನೂರು ಮೂರನೇ ಹಂತದಲ್ಲಿ ಅಥವಾ ಬೇರೆ ಕಡೆ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೊಡಿ ಅಂತ ಬರೆದಿದ್ದಾರೆ. ಇದು ತಪ್ಪಾಗಿದ್ದಕ್ಕೆ ವೈಟ್ನರ್ ಹಾಕಿದ್ದಾರೆ. ಅದನ್ನೇ ದೊಡ್ಡದೆಂದು ಬಿಂಬಿಸೋದು ಖಂಡನೀಯ ಎಂದು ಕಿಡಿಕಾರಿದರು.
ಸುಳ್ಳನ್ನೇ ಹತ್ತು ಬಾರಿ ಹೇಳಿ ಜನರಿಗೆ ನಂಬಿಸುವ ಕೆಲಸವನ್ನು ಬಿಜೆಪಿ ಜೆಡಿಎಸ್ ನವರು ಮಾಡುತ್ತಿದ್ದಾರೆ. ಇದು ದೊಡ್ಡ ದುರಂತದ ಸಂಗತಿ. ಈ ಪತ್ರಕ್ಕೆ ಸ್ಪಂದಿಸದಿದ್ದ ಕಾರಣ ಮತ್ತೆ 2021 ರಲ್ಲೂ ಪಾರ್ವತಿ ಅವರು ಮತ್ತೊಂದು ಪತ್ರ ಬರೆದಿದ್ದಾರೆ. ಈ ಮನವಿ ಆಧಾರ ಮೇಲೆ ನಿವೇಶನ ಹಂಚಿಕೆ ಮಾಡಿದ್ದಾರೆ. ಪ್ರಾಧಿಕಾರದ ನಿರ್ಣಯದಂತೆ 50:50 ಅನುಪಾತದ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಿದ್ದಾರೆ. ವೈಟ್ನರ್ ಹಾಕಿರುವುದನ್ನ ನೀವೇ ಊಹೆ ಮಾಡಿಕೊಂಡು ಸುಳ್ಳು ಹೇಳುವುದು ಖಂಡನೀಯ. ಸಿದ್ದರಾಮಯ್ಯ ಅವರಿಗೆ ಕೆಲಸ ಮಾಡಲು ಬಿಡ್ತಾ ಇಲ್ಲ. ಪ್ರಕರಣ ತನಿಖೆಯಲ್ಲಿದೆ ತನಿಖೆಯಲ್ಲಿ ಏನು ವರದಿ ಬರುತ್ತೆ ನೋಡೋಣ. ಅದನ್ನ ಬಿಟ್ಟು ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಎಂ.ಲಕ್ಷ್ಮಣ್ ಗುಡುಗಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ 63 ಕೇಸ್ ಗಳಿವೆ ಎಂದು ಹೇಳಿಕೆ ಕೊಟ್ಟಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಎಂ.ಲಕ್ಷ್ಮಣ್, 2007 ರಿಂದ 2023 ರವರಗೆ ಸಿದ್ದರಾಮಯ್ಯ ಅವರ ಮೇಲಿರುವ ಕೇಸ್ ಗಳು ಕೇವಲ 20. ಅವು ಕೇವಲ ಕೋವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಕೇಸ್, ಪ್ರತಿಭಟನಾ ಧರಣಿ ವೇಳೆ ನಿಯಮ ಉಲ್ಲಂಘನೆ ಕೇಸ್ ಗಳು. ಬಹುತೇಕ ಸಣ್ಣಪುಟ್ಟ ಕೇಸ್ ಗಳು. ಅವರೇನು ಕಳ್ಳತನ, ದರೋಡೆ, 420 ಕೇಸಗಳೇನೂ ಇಲ್ಲ. ಬಿಜೆಪಿ ವಿರುದ್ಧ ಕಳೆದ ಸರ್ಕಾರದ ಅವಧಿಯಲ್ಲಿ ಪ್ರತಿಭಟನಾ ಧರಣಿ ಮಾಡಿದ್ದಕ್ಕೆ ಹಲವು ಕೇಸ್ ಗಳ ಬಿದ್ದಿವೆ. ಯಾವ ಆಧಾರದ ಮೇಲೆ ಕುಮಾರಸ್ವಾಮಿ ಅವರು 63 ಕೇಸ್ ಇವೆ ಅಂತ ಹೇಳಿದ್ರು ಗೊತ್ತಿಲ್ಲ ಎಂದು ಎಂ.ಲಕ್ಷ್ಮಣ್ ಟೀಕಿಸಿದರು.
Key words: MLA, Srivatsa, G-category site, Muda, M. Laxman