ನವದೆಹಲಿ:ಜುಲೈ-23:(www.justkannada.in) ಕಳೆದ ಕೆಲವು ದಿನಗಳಿಂದ ನೈರುತ್ಯ ಮಾನ್ಸೂನ್ ತೀವ್ರಗೊಂಡಿದ್ದು, ಅಣೆಕಟ್ಟುಗಳಿಗೆ ನೀರಿನ ಹರಿವು ಗಮನಾರ್ಹವಾಗಿ ಹೆಚ್ಚಾಗಿದೆ. ಬಿರು ಬೇಸಿಗೆ, ಬರಗಾಲದ ಛಾಯೆಯಿಂದಾಗಿ ಜಲಾಶಯಗಳು ನೀರಿಲ್ಲದೇ ಬಣಗುಡುತ್ತಿದ್ದವು. ಆದರೀಗ ಮುಂಗಾರು ಮಳೆ ಅಬ್ಬರ ಜೋರಾದ ಹಿನ್ನಲೆಯಲ್ಲಿ ಜಲಾಶಯಗಳು ಭರ್ತಿಯಾಗುತ್ತಿವೆ.
ತಮಿಳುನಾಡಿನ ಪಾಪನಾಸಂ ಅಣೆಕಟ್ಟು ಪ್ರದೇಶಗಳಲ್ಲೂ ಉತ್ತಮ ಮಳೆಯಾಗುತ್ತಿದ್ದು, ಎರಡು ದಿನಗಳ ಹಿಂದೆ 949 ಕ್ಯೂಸೆಕ್ಸ್ನಲ್ಲಿದ್ದ ನೀರಿನ ಹರಿವು ಶನಿವಾರ 2,911 ಕ್ಯೂಸೆಕ್ಗಳಿಗೆ ಏರಿದೆ. ಪರಿಣಾಮವಾಗಿ, ಅಣೆಕಟ್ಟಿನ ನೀರಿನ ಮಟ್ಟವು ದಿನದಲ್ಲಿ 3.8 ಅಡಿ ಹೆಚ್ಚಾಗಿದೆ. ಇನ್ನು ಹೊರಹರಿವು 305 ಕ್ಯೂಸೆಕ್ ಗಳಲ್ಲಿದೆ.
59.78 ಅಡಿಗಳಲ್ಲಿದ್ದ ಸರ್ವಾಲಾರ್ ಅಣೆಕಟ್ಟಿನ ನೀರಿನ ಮಟ್ಟ 75.86 ಅಡಿಗಳಿಗೆ ಏರಿಕೆಯಾಗಿದೆ. ಮಣಿಮುಥರ್ ಅಣೆಕಟ್ಟಿನ ನೀರಿನ ಮಟ್ಟ50.63 ಅಡಿಗಳಷ್ಟಿದ್ದು, ಒಳಹರಿವು ಗಮನಾರ್ಹವಾಗಿ ಬದಲಾವಣೆಯಾಗಿಲ್ಲ.
ಇನ್ನು ಗದನಾನಾಥಿ ಜಲಾಶಯದಲ್ಲಿ ನೀರಿನ ಮಟ್ಟ 10 ಅಡಿಗಳಿಂದ 35 ಅಡಿಗಳಿಗೆ ಏರಿಕೆಯಾಗಿದ್ದು, 273 ಕ್ಯೂಸೆಕ್ಗಳ ಒಳಹರಿವು ಹೆಚ್ಚಾಗಿದೆ. ರಾಮನಾಥಿ ಅಣೆಕಟ್ಟಿನ ನೀರಿನ ಮಟ್ಟವು 6.25 ಅಡಿಗಳಿಂದ 50.25 ಅಡಿಗಳಿಗೆ ಏರಿಕೆಯಾಗಿದೆ.
ಕರುಪ್ಪನಾಥಿ, ಗುಂಡಾರ್, ನಂಬಿಯಾರ್, ಕೊಡುಮುಡಿಯಾರ್ ಅಣೆಕಟ್ಟುಗಳ ಮಟ್ಟ ಕ್ರಮವಾಗಿ 24.61, 23.50, 10.13 ಮತ್ತು 17 ಅಡಿಗಳಷ್ಟಿತ್ತು. ಆದಿವನಾಯನಾರ್ ಅಣೆಕಟ್ಟಿನ ನೀರಿನ ಮಟ್ಟ 5.5 ಅಡಿ ಏಕೆಯಾಗಿದ್ದು, 59 ಅಡಿ ಏರಿಕೆಯಾಗಿದೆ.
ಅದವಿನೈನಾರ್ ಅಣೆಕಟ್ಟು ಪ್ರದೇಶದಲ್ಲಿ ಗರಿಷ್ಠ 37 ಮಿ.ಮೀ ಮಳೆಯಾಗಿದೆ. ತಿರುನೆಲ್ವೇಲಿಯ ವಿವಿಧ ಸ್ಥಳಗಳಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಯವರೆಗೆ ಮಳೆಯ ಪ್ರಮಾಣ ಕೂಡ ಹೆಚ್ಚಾಗಿದ್ದು, ಗುಂಡಾರ್ ಅಣೆಕಟ್ಟು – 21, ಶಿವಗಿರಿ – 12, ತೆಂಕಾಸಿ – 7.3, ಮಣಿಮುಥರ್ – 5.60, ಅಂಬಾಸಮುತಿರಾಮ್ – 4.8, ಪಾಪನಸಂ – 4, ಅಯ್ಕುಡಿ – 3.2 , ಸರ್ವಲಾರ್, ರಾಮನಾಥಿ ಅಣೆಕಟ್ಟು ಮತ್ತು ಶೆಂಕೊಟ್ಟಿ- ತಲಾ 3, ಗದನಾಥಿ ಅಣೆಕಟ್ಟು – 2, ಕರುಪ್ಪನಾಡಿ ಅಣೆಕಟ್ಟು ಮತ್ತು ಸಂಕರಂಕೋಯಿಲ್- ತಲಾ 1 ಮಿ.ಮೀ ಮಳೆಯಾಗಿದೆ.
ಮುಂಗಾರು ಮಳೆ ಬಿರುಸು: ಭರ್ತಿಯಾಗುತ್ತಿವೆ ಜಲಾಶಯಗಳು
Monsoon brings more water into dams
Since the south-west monsoon has intensified in the last few days, the flow of water into dams has increased significantly.