ರಾಜ್ಯ ಬಜೆಟ್ ನಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್ , ಡಿಸೇಲ್ ಬೆಲೆ ಹೆಚ್ಚಳ…

ಬೆಂಗಳೂರು,ಮಾ,5,2020(www.justkannada.in): 2020-21ನೇ ಸಾಲಿನ  ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ,   ಪೆಟ್ರೋಲ್ ಮೇಲಿನ ತೆರಿಗೆ ಶೇ. 32ರಿಂದ 35ಕ್ಕೆ ಹೆಚ್ಚಳ ಮಾಡಲಾಗಿದ್ದು ಇದರಿಂದಾಗಿ ಪೆಟ್ರೋಲ್ ದರದಲ್ಲಿ 1.60 ರೂ ಹೆಚ್ಚಳವಾಗಲಿದೆ. ಹಾಗೆಯೇ ಡಿಸೇಲ್‌ ಮೇಲಿನ ತೆರಿಗೆಯನ್ನು ಶೇ 21ರಿಂದ 24ಕ್ಕೆ ಹೆಚ್ಚಳ ಮಾಡಲಾಗಿದ್ದು ಇದರಿಂದ ಡಿಸೇಲ್‌ ಬೆಲೆ ಪ್ರತಿ ಲೀಟರ್ ಗೆ 1.59. ರೂ ಹೆಚ್ಚಳ ವಾಗಲಿದೆ ಎಂದು ತಿಳಿಸಿದ್ದಾರೆ.

 

ಇನ್ನು ಮದ್ಯದ ಮೇಲಿನ ಹಾಲಿ ಸ್ಲ್ಯಾಬ್‌ ಅನ್ನು ಶೇ೬ರಷ್ಚು ಹೆಚ್ಚಳ ಮಾಡಲಾಗುವುದು  ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ. ಸಂಪನ್ಮೂಲ ಕೃಢೀಕರಣಕ್ಕೆ ಹೆಚ್ಚು ಒತ್ತು ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತೈಲಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿರುವುದರಿಂದಾಗಿ, ಡಿಸೇಲ್ ರೂ.1.59, ಪೆಟ್ರೋಲ್ ರೂ.1.60 ಪ್ರತಿಲೀಟರ್ ಗೆ ಏರಿಕೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ.

Key words: motorists – state budget- cm bs yeddyurappa- Petrol-diesel -price -hike.