ಮೈಸೂರು,ಜೂ,1,2021(www.justkannada.in): ಕೊರೋನಾ ನಿರ್ವಹಣೆಗೆ ಖರ್ಚು ಮಾಡಿದ ಅನುದಾನದ ಹಣದ ಬಗ್ಗೆ ಲೆಕ್ಕ ಕೇಳಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ಧ ಸಂಸದ ಪ್ರತಾಪ್ ಸಿಂಹ ಇದೀಗ ಮತ್ತೆ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಡಿಸಿ ಅಭಿರಾಮ್ ಅವರನ್ನು ನಾನು ಲೆಕ್ಕ ಕೇಳಿರಲಿಲ್ಲ. ಅವರು ಪಾರದರ್ಶಕ ಅಧಿಕಾರ ನಡೆಸಿದ್ದರು. ಆದರೆ ಈಗಿನ ಜಿಲ್ಲಾಧಿಕಾರಿಯಲ್ಲಿ ಪಾರದರ್ಶಕ ಅಧಿಕಾರ ಕಾಣುತ್ತಿಲ್ಲ. ನಾನು ಬಹಳ ಲೆಕ್ಕ ಕೇಳಿದ್ದೆ. ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ.? ಎಂದು ಪ್ರಶ್ನಿಸಿದರು.
ಯಾವುದೋ 2, 4, 5 ಅಂತ ರೌಂಡ್ ಫಿಗರ್ ಲೆಕ್ಕ ಕೊಡೋದ್ ಅಲ್ಲ. ಲೆಕ್ಕಕೊಡೊದಾದ್ರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ. ಸ್ಟೆಪ್ ಡೌನ್ ಆಸ್ಪತ್ರೆಗಳ ಬಗ್ಗೆಯೂ ಕೇಳಿದ್ದೆ ಅದಕ್ಕೆ ಉತ್ತರ ಕೊಟ್ಟಿದ್ದಾರಾ..? ಸಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದಕ್ಕೆ ಲೆಕ್ಕ ಕೊಟ್ಟಿದ್ದಾರಾ…? ಸುಮ್ಮನೆ ಹೋಟೆಲ್ ಗಳಿಗೆ 4 ಕೊಟಿ ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಬೇಕಲ್ವಾ ಎಂದು ಮತ್ತೆ ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಅನುದಾನದ ಖರ್ಚಿನ ಬಗ್ಗೆ ಲೆಕ್ಕ ಕೇಳಿದ್ದಾರೆ.
ಹಾಗೆಯೇ ಅಭಿರಾಂ ಜಿ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು. ಅದಕ್ಕೆ ಕೇಳಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತಿಲ್ಲ. ಈಗಾಗಿ ಲೆಕ್ಕ ಕೇಳುತಿದ್ದೇನೆ. ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಹಿಸುತ್ತೇನೆ.ವ್ಯಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೆ ಮಾಡುತ್ತೇನೆ. ನನ್ನ ಕೆಲಸಕ್ಕೆ ಬೆರಳು ತೋರಿಸಿ ಯಾರು ಮಾತನಾಡಬಾರದು ಅಷ್ಟೇ ಎಂದರು.
ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ.
ಇನ್ನು ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆಯ ಲೆಕ್ಕದ ಬಗ್ಗೆ ಶಾಸಕ ಸಾ.ರಾ ಮಹೇಶ್ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೆ ಇದೀಗ ಸಂಸದ ಪ್ರತಾಪ್ ಸಿಂಹ ಅವರೂ ಕೂಡ ಸಾವಿನ ಲೆಕ್ಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ. ನಾವು ಹಲವು ಕಡೆ ಪ್ರವಾಸ ಮಾಡುತ್ತಿರುತ್ತೇವೆ. ಆಗ ಜನರು ಹಲವು ದೂರುಗಳನ್ನು ಹೇಳುತ್ತಿರುತ್ತಾರೆ. ನಾವೇ ಬೆಡ್ ಕೊಡಿಸಿದ ರೋಗಿಗಳಿಗೆ ಐಸಿಯು ಸಿಗದೆ ಸತ್ತಿದ್ದಾರೆ ಅಂತಾರೆ. ಆದರೆ ಜಿಲ್ಲಾಡಳಿತ ಲೆಕ್ಕಕ್ಕು ಅಂತ್ಯ ಸಂಸ್ಕಾರ ನಡೆಯುತ್ತಿರುವುದಕ್ಕೂ ವ್ಯತ್ಯಾಸ ಇದೆ. ಈ ಬಗ್ಗೆ ನನಗೂ ಅನುಮಾನ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
Key words: MP- Pratap Simha- against -Mysore DC -Rohini Sindhuri