ಮೈಸೂರು,ಅಕ್ಟೋಬರ್,24,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ಇದೀಗ ಸ್ತಬ್ದಚಿತ್ರಗಳ ಮೆರವಣಿಗೆ ಆರಂಭವಾಗಿದೆ.
ವಿವಿಧ ಜಿಲ್ಲೆಗಳ ವಿವಿಧ ಇಲಾಖೆಯ 49 ಸ್ತಬ್ದಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ. ಈ ಬಾರಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯ ಯೋಜನೆ ಮತ್ತು ಬೆಂಗಳೂರು ಜಿಲ್ಲೆಯ ಚಂದ್ರಯಾನ-3 ಸ್ತಬ್ಧಚಿತ್ರ ಪ್ರಮುಖ ಆಕರ್ಷಣೆಯಾಗಿದೆ. 49 ಸ್ತಬ್ದಚಿತ್ರಗಳು ಯಾವುವು ಇಲ್ಲಿದೆ ನೋಡಿ ಪಟ್ಟಿ..
ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ&ಬನಶಂಕರಿ ದೇವಿ ಟ್ಯಾಬ್ಲೋ
ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ ಟ್ಯಾಬ್ಲೋ
ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ತಬ್ಧಚಿತ್ರ
ಬೆಂಗಳೂರು ಗ್ರಾಮಾಂತರ-ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಟ್ಯಾಬ್ಲೋ
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3 ಸ್ತಬ್ಧಚಿತ್ರ
ಬೀದರ್-ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ ಟ್ಯಾಬ್ಲೋ
ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ ಸ್ತಬ್ಧಚಿತ್ರ
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ-ಬೆಟ್ಟದಿಂದ ಬಟ್ಟಲಿಗೆ ಸ್ತಬ್ಧಚಿತ್ರ
ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಟ್ಯಾಬ್ಲೋ
ದ.ಕನ್ನಡ-ಪಿಲಕುಳ ಗುತ್ತಿನಮನೆ, ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್
ದಾವಣಗೆರೆ-ಸಂತ ಸೇವಾಲಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ
ಧಾರವಾಡ-ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಟ್ಯಾಬ್ಲೋ
ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ಧಚಿತ್ರ ಮೆರವಣಿಗೆ
ಹಾಸನ- ಹಾಸನಾಂಬ ದೇವಾಲಯ, ಹಲ್ಮಡಿ ಈಶ್ವರ ದೇವಸ್ಥಾನ ಟ್ಯಾಬ್ಲೋ
ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು & ಗದ್ದಿಗೆ ಕಾಗಿನೆಲೆ
ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿ ಧಾಮ ಬುದ್ಧನ ಸ್ತೂಪ, ತೊಗರಿ ಕಣಜ, ಸಿಮೆಂಟ್ ಕಾರ್ಖಾನೆ
ಕೊಡಗು ಜಿಲ್ಲಾ ಪಂಚಾಯಿತಿ-ಕೊಡಗಿನ ಪ್ರೇಕ್ಷಣೀಯ ಸ್ಥಳ ಸ್ತಬ್ಧಚಿತ್ರ
ಕೋಲಾರ-ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ
ಕೊಪ್ಪಳ-ಕಿನ್ನಾಳ ಕಲೆ ಹಾಗೂ ಕೈಮಗ್ಗ ಸ್ತಬ್ಧಚಿತ್ರ
ಮಂಡ್ಯ-ಸಾಂಪ್ರದಾಯಿಕ ಉದ್ಯಮ ಆಲೆಮನೆ ಸ್ತಬ್ಧಚಿತ್ರ
ಮೈಸೂರು-ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳ ಸ್ತಬ್ಧಚಿತ್ರ
ರಾಯಚೂರು-ನವರಂಗ ದರ್ವಾಜ ಹಾಗೂ ಆರ್ಟಿಪಿಎಸ್ ಟ್ಯಾಬ್ಲೋ
ರಾಮನಗರ-ಚನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು
ಶಿವಮೊಗ್ಗ-ಕುವೆಂಪು ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋ
ತುಮಕೂರು-ಮೂಡಲಪಾಯ ಯಕ್ಷಗಾನ, ತವರು ಸ್ತಬ್ದಚಿತ್ರ
ಉಡುಪಿ-ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ ಸ್ತಬ್ದಚಿತ್ರ
ಉತ್ತರ ಕನ್ನಡ- ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಂಗಳಿಕ ಸಂರಕ್ಷಣೆ
ವಿಜಯಪುರ-ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ
ವಿಜಯನಗರ- ವಿಠಲ ದೇವಸ್ಥಾನ ಸ್ತಬ್ದಚಿತ್ರ
ಯಾದಗಿರಿ-ವೇಣುಗೋಪಾಲಸ್ವಾಮಿ ದೇವಸ್ಥಾನ ಸ್ತಬ್ದಚಿತ್ರ
ಸ್ತಬ್ದಚಿತ್ರ ಉಪಸಮಿತಿ- ಅರಮನೆ ವಾದ್ಯಗೋಷ್ಠಿ ಸ್ತಬ್ದಚಿತ್ರ
ಸ್ತಬ್ದಚಿತ್ರ ಉಪಸಮಿತಿ-ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು ಸೋಮನಾಥಪುರ ದೇಗುಲ
ಸಮಾಜಕಲ್ಯಾಣ ಇಲಾಖೆ-ಸಂವಿಧಾನ ಪೀಠಿಕೆ, ಇಲಾಖೆ ಯೋಜನೆಗಳು
ವಾರ್ತಾ ಮತ್ತು ಪ್ರಚಾರ ಇಲಾಖೆ- ಸರ್ಕಾರದ ಗ್ಯಾರಂಟಿ ಯೋಜನೆಗಳು ಟ್ಯಾಬ್ಲೋ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಗೃಹಲಕ್ಷ್ಮೀ ಯೋಜನೆ&ಇತರೆ ಯೋಜನೆಗಳು
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-ವಾಲ್ಮಿಕಿ ಪುತ್ಥಳಿ& ಇಲಾಖೆಯ ಯೋಜನೆ
ಆಹಾರ ಇಲಾಖೆ-ಹಸಿವಿನಿಂದ ಯಾರೂ ಬಳಲಬಾರದು ಅದಕ್ಕಾಗಿ ಅನ್ನಭಾಗ್ಯ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ-ಶೌರ್ಯ-ನ್ಯಾಯ-ರಕ್ಷೆ ಸ್ತಬ್ದಚಿತ್ರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಅಂಗಾಂಗ ದಾನ, STEMI, ಆಶಾಕಿರಣ
ಸಹಕಾರಿ ಹಾಲು ಉತ್ಪಾದಕರ ಮಹಲಾ ಮಂಡಳಿ ನಿಯಮಿತ-ಕ್ಷೀರಭಾಗ್ಯ ಯೋಜನೆ
ಚೆಸ್ಕಾಂ-ಗೃಹಜ್ಯೋತಿ, ಕೃಷಿ ಸೋಲಾರ ಸೆಟ್, ಗ್ರಾಹಕರ ಸಲಹಾ ಸಮಿತಿ
ವೈದ್ಯಕೀಯ ಕಾಲೇಜು&ಸಂಶೋಧನಾ ಸಂಸ್ಥೆ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯ
ಪ್ರವಾಸೋದ್ಯಮ ಇಲಾಖೆ-ಲಕ್ಕುಂಡಿ ಬ್ರಹ್ಮ ದೇವಾಲಯ
ಕಾವೇರಿ ನೀರಾವರಿ ನಿಗಮ-ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ
ವಾಕ್ ಶ್ರವಣ ಸಂಸ್ಥೆ-ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್ನ ಕೊಡುಗೆ
ಜಗಜೀವನ ರಾಮ್ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮ-ಲಿಡ್ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಆಶಾಕಿರಣ
ಸಮಾಜ ಕಲ್ಯಾಣ ಇಲಾಖೆ-ಭಾರತೀಯ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್,
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ- ಸಂವಿಧಾನ ಪೀಠಿಕೆ ಓದು ಕಡ್ಡಾಯ ಟ್ಯಾಬ್ಲೋ
Key words: mysore dasara-49 Tablo -Jamboo Savari –Parade- Special – Different -Districts