ಮೈಸೂರು,ಅಕ್ಟೋಬರ್,24,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿಯೂ ನಾನಾ ಸ್ತಬ್ದಚಿತ್ರಗಳು ಮತ್ತು ಕಲಾತಂಡಗಳ ಪ್ರದರ್ಶನಗೊಳ್ಳಲಿದೆ.
ಈ ಬಾರಿ 49 ಸ್ತಬ್ದಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದು, ರಾಜ್ಯ ಸರ್ಕಾರದ ಐದು ಯೋಜನೆಗಳ ಸಂದೇಶ ಸಾರುವ ಸ್ತಬ್ಧ ಚಿತ್ರಗಳು ಕೂಡ ಪ್ರದರ್ಶನಗೊಳ್ಳಲಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆಯ ಸ್ಥಬ್ಧ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ.
ಜಂಬೂ ಸವಾರಿ ಮುನ್ನ ವಿಶೇಷ ಟ್ಯಾಬ್ಲೊಗಳು ಸಾಗಲಿವೆ. ಅರಮನೆಯಿಂದ ಬನ್ನಿ ಮಂಟಪದವರೆಗೂ ಸ್ಥಬ್ಧ ಚಿತ್ರಗಳು ಸಾಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಟ್ಯಾಬ್ಲೊಗಳು ಆಗಮಿಸಿವೆ.
Key words: Mysore dasara-5 guarantee project- tablo- Jamboo Savari