ಮೈಸೂರು,ಸೆಪ್ಟಂಬರ್,16,2021(www.justkannada.in): ಮೈಸೂರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸಭೆ ವೇಳೆ ಪತ್ರಕರ್ತನ ಮೇಲೆ ನಡೆದಿರುವ ಹಲ್ಲೆಯನ್ನ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದೆ.
ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಇಂದು(ಗುರುವಾರ) ಬೆಳಗ್ಗೆ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ನಡೆದ ಹಿಂದೂ ಜಾಗರಣ ವೇದಿಕೆಯ ಸಭೆಗೆ ವರದಿಗಾಗಿ ಬಂದಿದ್ದ ದಿ ಡೈಲಿ ಕೌಸರ್ ಪತ್ರಿಕೆಯ ಚೀಫ್ ಎಡಿಟರ್ ಮಹಮ್ಮದ್ ಸಪ್ಲರ್ ಕೈಸರ್ ಅವರ ಮೇಲೆ ಅಲ್ಲಿನ ಕೆಲವರು ಅನುಮಾನಪಟ್ಟು ಹಲ್ಲೆ ಮಾಡಿದ್ದಾರೆ. ಇದು ಖಂಡನೀಯ ಪರದಿಗಾಗಿ ತೆರಳಿದ ಪತ್ರಕರ್ತನ ಮೇಲೆ ಅನುಮಾನದಿಂದ ಹಲ್ಲೆ ಮಾಡುವ ಕ್ರಮ ಒಳ್ಳೆಯದಲ್ಲ.
ಈ ಕಾರಣ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಪತ್ರಕರ್ತರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
Key words: Mysore –District- Journalists- Association -condemns -assault – journalist
ENGLISH SUMMARY…
Mysuru District Journalists Association condemns attack on journo: Demands action
Mysuru, September 16, 2021 (www.justkannada.in): The Mysuru District Journalists Association (MDJA) has condemned the attack on a journalist, by the members of Hindu Jagaran Vedike, in Mysuru, while they were demonstrating.
The MDJA President S.T. Ravikumar has written a letter to the Mysuru City Police Commissioner condemning the incident and has requested to initiate action against those who attacked the journo. Chief Editor of The Daily Kowser newspaper Mohammed Saflar Kaiser was at the spot where the members of Hindu Jagaran Veidke were demonstrating today morning in front of the Kote Anjaneya Swami temple in Mysuru. A few among the demonstrators who grew suspicious attacked him. Suspecting a journalist and attacking him is not a good development, he stated.
MDJA also has urged suitable against those who attacked the journo, and also has requested the police to provide suitable security to journalists who attend religious programs.
Keywords: MDJA/ attack on journo/ demonstration/ protestors/ Hindu Jagaran Vedike