ಮೈಸೂರು,ಮಾ,9,2020(www.justkannada.in): ಬೇಸಿಗೆಯಲ್ಲಿ ಸಂಭವಿಸುವ ಅಗ್ನಿ ಅವಘಡ ಎದುರಿಸಲು ಮೈಸೂರು ಅಗ್ನಿಶಾಮಕ ದಳ ಸನ್ನದ್ದವಾಗಿದ್ದು ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬರ್ತೇವೆ ಎಂದು ನಗರದ ಸರಸ್ವತಿ ಪುರಂ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಅರಸ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸರಸ್ವತಿಪುರಂ ಅಗ್ನಿಶಾಮಕ ಠಾಣಾಧಿಕಾರಿನಾಗರಾಜ್ ಅರಸ್, ಪ್ರತಿ ಕ್ಷಣ ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸಿದ್ರು ರಕ್ಷಣೆ ನಾವ್ ರೆಡಿ ಮಳೆಯಾಗಲಿ ಬೆಂಕಿಯಾಗಲಿ, ಯಾವುದೇ ಅವಘಡಗಳು ಆದರು ನಮಗೆ ಕರೆ ಮಾಡಿ. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಬರ್ತೇವೆ ಎಂದು ತಿಳಿಸಿದರು.
ಈ ಬಗ್ಗೆ ಎಲ್ಲಾ ಅಗ್ನಿ ಶಾಮಕ ಠಾಣೆಗಳೂ ವಾಹನ ನೀಡಿಲಾಗಿದೆ. ಪ್ರಮುಖವಾಗಿ ಅರಣ್ಯ ಪ್ರತಿ ವಲಗಳಲ್ಲೂ ಒಂದೊಂದು ವಾಹನ ನೀಡಲಾಗಿದೆ. 24×7 ಸೇವೆ ನೀಡಿಲು ಸಿದ್ಧರಾಗಿದ್ದೇವೆ. ಬೇಸಿಗೆ ಸಂದರ್ಭದಲ್ಲಿ ಬೆಂಕಿ ಅವಘಡಗಳು ಹೆಚ್ಚು. ಯಾವುದೇ ಕ್ಷಣದಲ್ಲಿ ಹೆಚ್ಚವರಿ ಸೇವೆ ಅಗತ್ಯವಿದ್ದಲ್ಲಿ ತಕ್ಷಣ ಹಾಜರಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜುಗಳು, ಕಾಡಂಚಿನ ಗ್ರಾಮಗಳಲ್ಲಿ ಪಾತ್ಯಕ್ಷಿಕೆ ನೀಡಿ ಅರಿವು ಮೂಡಿಸಲಾಗಿದೆ ಎಂದು ನಾಗರಾಜ್ ಅರಸ್ ಹೇಳಿದರು.
ಅಗ್ನಿಅವಘಡ ಸಂಭವಿಸಿದ್ದಲ್ಲಿ ಸಾರ್ವಜನಿಕರು ತಕ್ಷಣ 101 ಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ. ಈ ವೇಳೆ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸುತ್ತೇವೆ ಎಂದು ಸರಸ್ವತಿ ಪುರಂ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಅರಸ್ ತಿಳಿಸಿದರು.
Key words: mysore- Fire engine -location -within -minutes – call