ಮೈಸೂರು,ಸೆಪ್ಟಂಬರ್,15,2021(www.justkannada.in): ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ಈ ಮಧ್ಯೆ ನೈಟ್ ಕರ್ಫ್ಯೂ ಮುಂದುವರೆಕೆಗೆ ಮೈಸೂರು ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.
ಮೈಸೂರಿನಲ್ಲಿ ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಎಲ್ಲಾ ಚಟುವಟಿಕೆಗಳು ಎಂದಿನಂತೆ ಇವೆ. ರಾತ್ರಿ ಬಸ್ ಸಂಚಾರ ನಿಂತಿಲ್ಲ. ರೈಲು, ವಿಮಾನ ಸಂಚಾರ ಎಂದಿನಂತೆ ಇದೆ. ಕಲ್ಯಾಣಮಂಟಪದಲ್ಲಿ ರಾತ್ರಿ ಕಾರ್ಯಕ್ರಮಗಳು ನಡೆಯುತ್ತಿವೆ. ಮೈಸೂರು ಹೇಳಿ ಕೇಳಿ ಪ್ರವಾಸಿಗರ ತಾಣ. ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ರಾತ್ರಿ 9 ಗಂಟೆಗೆ ಹೋಟೆಲ್ ಬಂದ್ ಮಾಡಿದರೆ ಪ್ರವಾಸಿಗರಿಗೆ ತೊಂದರೆಯಾಗುತ್ತದೆ.
ಅಲ್ಲದೆ ಮೈಸೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹೀಗಾಗಿ ನೈಟ್ ಕರ್ಪ್ಯೂ ತೆರವುಗೊಳಿಸಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Key words: Mysore -Hotel –Owners- Association –Opposes- Continuing- Night Curfew