ಮೈಸೂರಲ್ಲಿ ಪತ್ರಕರ್ತನ ಮೇಲೆ ಪೇದೆ ಹಲ್ಲೆ ಪ್ರಕರಣ : ನಿರ್ಧಿಷ್ಟ ಘಟನೆಗೆ ಮಾತ್ರ ನಮ್ಮ ವಿರೋಧ. ಈ ಬಗ್ಗೆ ದೂರು ದಾಖಲು : ಅಧ್ಯಕ್ಷ ಸಿ.ಕೆ.ಮಹೇಂದ್ರ

 

ಮೈಸೂರು, ಏ.18, 2020 : (www.justkannada.in news) : ಕರ್ತವ್ಯಕ್ಕೆ ತೆರಳುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಪೇದೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.

ನಗರದ ಖಾಸಗಿ ವಾಹಿನಿ ನ್ಯೂಸ್ 1 ಫಸ್ಟ್  ವರದಿಗಾರ ಯಶಸ್ ಅವರಿಗೆ ಇಂದು ಮಧ್ಯಾಹ್ನ ಪೊಲೀಸ್ ಪೇದೆ ಹಲ್ಲೆ ನಡೆಸಿದ್ದ. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

 mysore-journalist-assult-case-registerd-kuvempunagara-police.station

ಘಟನೆಗೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪೊಲೀಸರಿಂದ ಪತ್ರಕರ್ತನ ಮೇಲೆ ಹಲ್ಲೆ ವಿಚಾರ ಕುರಿತಂತೆ ಬೇರೆಯವರು ಪರಿಸ್ಥಿತಿಯ ಲಾಭ ಪಡೆಯುವುದು ಬೇಡ. ನಿರ್ಧಿಷ್ಟ ಘಟನೆಗೆ ಮಾತ್ರ ನಮ್ಮ ವಿರೋಧವಿದೆ. ಈ ಘಟನೆಯನ್ನು ದುರುಪಯೋಗ ಪಡಿಸಿಕೊಂಡು ಎಲ್ಲ ಪೊಲೀಸರ ನೈತಿಕ ಬಲವನ್ನು ಕುಗ್ಗಿಸುವ ಕೆಲಸವಾಗಬಾರದು. ಪೊಲೀಸ್ ಸಮುದಾಯದ ಬಗ್ಗೆ ನಮಗೆ ಗೌರವವಿದೆ. ಎಲ್ಲರನ್ನೂ ದೂಷಿಸುವುದು ಬೇಡ. ಸದರಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

key words : mysore-journalist-assult-case-registerd-kuvempunagara-police.station