H.N. Girish, Lecturer, Government Girls’ PU College, Hunsur, Mysuru District, and R.Narayana swamy, Government High School, Bashettyhalli, Doddaballapura, Bengaluru Rural Division. selected for National Teachers’ Award.
ಮೈಸೂರು, ಆ.27,2024: (www.justkannada.in news) 2024 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ಜಿಲ್ಲೆ, ಹುಣಸೂರಿನ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕರಾದ ಎಚ್.ಎನ್.ಗಿರೀಶ್ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗದ ದೊಡ್ಡಬಳ್ಳಾಪುರದ ಬಾಶೆಟ್ಟಿ ಹಳ್ಳಿಯ ಸರಕಾರಿ ಪ್ರೌಢಶಾಲೆಯ ಆರ್. ನಾರಾಯಣಸ್ವಾಮಿ ಆಯ್ಕೆಯಾದ ಶಿಕ್ಷಕರು.
ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 5, 2024 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಪ್ರಶಸ್ತಿಯು ಮೆರಿಟ್ ಪ್ರಮಾಣಪತ್ರ, 50,000 ರೂ.ಗಳ ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರ ಊಟ ಮತ್ತು ವಸತಿ ವ್ಯವಸ್ಥೆಯನ್ನು ನವ ದೆಹಲಿಯ ಹೋಟೆಲ್ ‘ದಿ ಅಶೋಕ್’, 50-ಬಿ, ಡಿಪ್ಲೊಮ್ಯಾಟಿಕ್ ಎನ್ಕ್ಲೇವ್, ಚಾಣಕ್ಯಪುರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಸೆಪ್ಟೆಂಬರ್ 3 (ಮಧ್ಯಾಹ್ನ) ರಿಂದ ಸೆಪ್ಟೆಂಬರ್ 6, 2024 ರವರೆಗೆ (ಮುಂಜಾನೆ) ಮಾಡಲಾಗಿದೆ. ಸೆಪ್ಟೆಂಬರ್ 3 ರಂದು ಸಂಜೆ 5.00 ಗಂಟೆಗೆ ನವದೆಹಲಿಯ ಹೋಟೆಲ್ ಅಶೋಕ್ನಲ್ಲಿ ಬ್ರೀಫಿಂಗ್ ಸಭೆ ನಡೆಯಲಿದೆ.
ಬಯೋಡೇಟಾ :
ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಎಚ್.ಎನ್.ಗಿರೀಶ್ ಅವರಿಗೆ ಕಳೆದ ವರ್ಷವಷ್ಟೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಕೆಲ ದಿನಗಳ ಹಿಂದೆಯಷ್ಟೆ, ಜಿ-೨೦ ಶೃಂಗಸಭೆಯ ನ್ಯಾಷನಲ್ ಎಜುಕೇಷನ್ ಎಕ್ಸ್ ಲೆನ್ಸ್ ಅವಾರ್ಡ್ ಪ್ರಶಸ್ತಿಯನ್ನು ನೋಯ್ಡಾದಲ್ಲಿ ಪ್ರಧಾನ ಮಾಡಲಾಗಿತ್ತು.
ಸುಮಾರು ಮೂರು ದಶಕಗಳಿಗೂ ಹೆಚ್ಚುಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಿರೀಶ್, ಏಡ್ಸ್ ಹಾಗೂ ಹೆಣ್ಣು ಮಕ್ಕಳ ಋತುಸ್ರಾವದಂತ ಸಾಮಾಜಿಕ ಪಿಡುಗಿನ ಬಗೆಗೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವರು. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆಯೇ ಮೈಸೂರು ಜಿಲ್ಲೆಯ ತಿ.ನರಸೀಪುರ ಸಮೀಪ ಏಡ್ಸ್ ಅಮ್ಮನ ದೇವಾಲಯ ಸ್ಥಾಪಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದವರು.
ಗಿರೀಶ್ ಅವರ ಈ ಅನನ್ಯ ಸೇವೆ ಎಷ್ಟು ಪ್ರಭಾವ ಬೀರಿತ್ತು ಎಂದರೆ, ಅಮೇರಿಕಾದ ಹಾರ್ವಡ್ಡ್ ಯೂನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿನಿ ಮೈಸೂರಿಗೆ ಆಗಮಿಸಿ ಏಡ್ಸ್ ಅಮ್ಮನ ದೇವಾಲಯದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ ʼ ಧರ್ಮ ಮತ್ತು ವಿಜ್ಞಾನ ʼ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.
ಅತ್ಯಂತ ಉದಯೋನ್ಮುಖ ಹಾಗೂ ಉತ್ಸಾಹಿ ಶಿಕ್ಷಕರಾದ ಎಚ್. ಎನ್. ಗಿರೀಶ್ , ಹುಣಸೂರಿನ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರ ಎಚ್.ಎನ್.ವೆಂಕಟೇಶ್ ಮೈಸೂರಿನ ಹಿರಿಯ ವಕೀಲರು ಹಾಗೂ ಕನ್ನಡದ ಪ್ರಥಮ ಕಾನೂನು ಮಾಸ ಪತ್ರಿಕೆ “ಲಾ ಗೈಡ್ “ ನ ಸಂಪಾದಕರು.
key words: Mysuru teacher, selected for, National Teachers’ Award
SUMMARY:
H.N. Girish, Lecturer, Government Girls’ PU College, Hunsur, Mysuru District, and R.Narayana swamy, Government High School, Bashettyhalli, Doddaballapura, Bengaluru Rural Division. selected for National Teachers’ Award.