ಮೈಸೂರಿನಲ್ಲಿ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಅಭಿನಂದನೆ, ಸನ್ಮಾನ.

ಮೈಸೂರು,ಜೂನ್,10,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಗೆಲುವು ಸಾಧಿಸಿ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸನ್ಮಾನ ಮಾಡಲಾಯಿತು.

ನಗರದ ಸುಣ್ಣದಕೇರಿ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರ ಪಾಲಿಕೆ ವಾಜಿ ಸದಸ್ಯ ಲೋಕೇಶ್‌ಪಿಯಾ ಅವರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಅವರು ಅಭಿನಂದನೆ ಸ್ವೀಕರಿಸಿದರು.

ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಸತೀಶ್ ಜಾರಕಿಹೊಳಿ,  ಪ್ರಿಯಾಂಕಾ ಜಾರಕಿಹೊಳಿ ಪರ ಘೋಷಣೆ ಕೂಗಿದರು. ಪ್ರಿಯಾಂಕಾ ಅವರಿಗೆ ಮಹರ್ಷಿ ಭಾವಚಿತ್ರವಿದ್ದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ  ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಪಿಯಾ, ನಾಯಕ ಸಮಾಜಕ್ಕೆ ಸೇರಿದ ಪ್ರಿಯಾಂಕಾ ಅವರು ಚಿಕ್ಕ ವಯಸ್ಸಿನಲ್ಲಿ ಸಂಸದರಾಗಿರುವುದು ಸಂತಸವಾಗಿದೆ. ನಗರಕ್ಕೆ ಭೇಟಿ ನೀಡಿದ ಅವರಿಗೆ ನಾಯಕ ಸಮಾಜದಿಂದ ಸನ್ಮಾನ ಏರ್ಪಡಿಸುವ ಅವಕಾಶ ದೊರೆತಿದೆ ಎಂದರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ನಗರ ಪಾಲಿಕೆಮಾಜಿ ಸದಸ್ಯರಾದ ಎಂ.ಎಸ್.ಶೋಭಾ, ಮುಖಂಡರಾದ ಎಚ್.ವಿ.ಚಂದ್ರು, ಹಿನಕಲ್ ಕೆಂಪನಾಯಕ, ದೇವರಾಜ್ ಟಿ.ಕಾಟೂರು, ಆರ್.ಮಾದೇಶ್, ಹೊನ್ನನಾಯಕ, ಸ್ವಾಮಿನಾಯಕ ಮೊದಲಾದವರು ಹಾಜರಿದ್ದರು.

Key words: new MP, Priyanka Jarakiholi, Mysore