ಮೈಸೂರು,ಜನವರಿ,6,2021(www.justkannada.in): ಹುಣಸೂರಿಗೆ ಜಿಟಿಡಿ ಮಗ ಬರಬಾರದು ಅಂತ ಯಾರು ಒಳಸಂಚು ಮಾಡಿದ್ರು. ಅವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ. ಪಕ್ಷ ವಿರೋಧಿ ಚಟುವಟಿಕೆ ಯಾರಿಗೆ ಅನ್ವಯ ಆಗುತ್ತೆ ಅವರ ಮೇಲೆ ಕ್ರಮ ಆಗಬೇಕಲ್ಲವೇ…? ಹೀಗೆ ಕೆ.ಆರ್ ನಗರ ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ಶಾಸಕ ಜಿ.ಟಿ ದೇವೇಗೌಡರು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದಿಂದ ತಮ್ಮನ್ನ ಉಚ್ಛಾಟನೆ ವಿಚಾರ ವರದಿಯಾದ ಹಿನ್ನೆಲೆ ಈ ಕುರಿತು ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಜಿಟಿ ದೇವೇಗೌಡರು, ಪ್ರಜ್ವಲ್ ರನ್ನ ಹುಣಸೂರಿಗೆ ನಾನೇ ಕರೆದುಕೊಂಡು ಬಂದೆ ಅಂತ ಮೈಸೂರಿನ ಹೈಕಮಾಂಡ್ ಹೇಳಿದ್ದಾರೆ. ಸಾಲಿಗ್ರಾಮದ ಸಭೆಯಲ್ಲಿ ಪ್ರಜ್ವಲ್ ರನ್ನ ಹುಣಸೂರಿಗೆ ಕರೆತಂದೆ ಅಂತ ಕೆ.ಆರ್.ನಗರ ಶಾಸಕರೇ ಹೇಳಿದ್ದಾರೆ. ಹೆಚ್.ವಿಶ್ವನಾಥ್ ರನ್ನು ಪಕ್ಷಕ್ಕೆ ಕರೆತಂದಿದ್ದು ನಾನೇ ಅಂತಾನು ಅವರೇ ಹೇಳಿದ್ದಾರೆ. ನನ್ನ ಮಗನನ್ನ ಕರೆದುಕೊಂಡು ಹೋಗಿ ಟಿಕೆಟ್ ಕೊಡದೆ ಅವಮಾನ ಮಾಡಿದ್ದಾರೆ ಅಂತ ಭಾವನಿಯವರೇ ಹೇಳಿದ್ದಾರೆ. ಇದಕ್ಕಾಗಿ ಯಾರು ಆ ರೀತಿ ಮಾಡಿದ್ರು ಅವರನ್ನ ಸೋಲಿಸಿ ಅಂತಾನು ಹೇಳಿದ್ದೀನಿ ಅಂತ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲವು ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಬಂದಿದೆ ಎಂದು ಹೆಸರು ಹೇಳದೆ ಶಾಸಕ ಸಾ.ರಾ ಮಹೇಶ್ ಗೆ ಪರೋಕ್ಷ ಟಾಂಗ್ ನೀಡಿದರು.
ಜೆಡಿಎಸ್ ಪಕ್ಷದಲ್ಲಿ ಒಂದೆ ಒಂದು ಸಣ್ಣ ತಪ್ಪು ನಾನು ಮಾಡಿಲ್ಲ. ಯಾರು ಜೆಡಿಎಸ್ ಬಳಸಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ಗೆ ಸಹಾಯ ಮಾಡಿದ್ದಾರೆ. ಗೆಲ್ಲದೆ ಇರುವಂತ ಜಾಗದಲ್ಲಿ ಗೆಲ್ಲಲು ಜೆಡಿಎಸ್ ಬಳಸಿಕೊಂಡಿದ್ದಾರೆ. ಹುಣಸೂರಿಗೆ ಜಿಟಿಡಿ ಮಗ ಬರಬಾರದು ಅಂತ ಯಾರು ಒಳಸಂಚು ಮಾಡಿದ್ರು. ಅವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ. ಪಕ್ಷ ವಿರೋಧಿ ಚಟುವಟಿಕೆ ಯಾರಿಗೆ ಅನ್ವಯ ಆಗುತ್ತೆ ಅವರ ಮೇಲೆ ಕ್ರಮ ಆಗಬೇಕಲ್ಲವೇ ಎಂದು ಜಿಟಿಡಿ ಪ್ರಶ್ನಿಸಿದರು.
key words: No action- MLA-GT Deve Gowda- Indirect –outrage-MLA- SARA mahesh