ಮೈಸೂರು,ಮೇ,31,2022(www.justkannada.in): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸಾಕಷ್ಟು ಚರ್ಚೆಯಾಗುತ್ತಿದ್ದು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಮಾತನಾಡಿರುವ ಮೈಸೂರು ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಲೆಫ್ಟು ಬೇಡ, ರೈಟೂ ಬೇಡ. ಇತಿಹಾಸವನ್ನು ಇತಿಹಾಸವಾಗಿಯೇ ಬೋಧಿಸಿ ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯದುವೀರ್ ಅವರು, ಮಕ್ಕಳಿಗೆ ಸರಿಯಾದ ಇತಿಹಾಸ ಹೇಳಿಕೊಡಬೇಕು. ಇತಿಹಾಸವನ್ನು ತಿದ್ದಬಾರದು. ಮಕ್ಕಳಿಗೆ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯ ಅಳವಡಿಸಬೇಕು ಎಂದಿದ್ದಾರೆ.
ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಬೇಕು.
ಪಾರಂರಿಕ ಕಟ್ಟಡಗಳ ಉಳಿವು ಕುರಿತು ಪ್ರತಿಕ್ರಿಯಿಸಿದ ಯದುವೀರ್ ಅವರು, ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಬೇಕು. ಈಗಿರುವ ಟೆಂಡರ್ ಪ್ರಕ್ರಿಯೆ ಪ್ರಕಾರ, ಕಟ್ಟಡವನ್ನು ನೆಲಸಮ ಮಾಡುವುದು ಮತ್ತು ಮರು ನಿರ್ಮಾಣ ಮಾಡುವುದು ಅಂತ ಮಾತ್ರ ಇದೆ. ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ಚೇತನಕ್ಕೆ ಅನುಮತಿ ನೀಡುತ್ತಿಲ್ಲ. ಅದು ಕೂಡ ಸರಿಯಾಗಬೇಕು. ಆಯುರ್ವೇದಿಕ್ ಆಸ್ಪತ್ರೆ ಚೆನ್ನಾಗಿ ಪುನಶ್ಚೇತನವಾಗಿದೆ. ಕೇವಲ ಸ್ಮಾರಕವಾಗಿಲ್ಲ, ಜನರಿಗೆ ಬಳಕೆ ಆಗುತ್ತಿದೆ. ಪಾರಂಪರಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಾದರಿ ಆಗಬೇಕು ಎಂದರು.
Key words: No Left- No Right-history -Advice –mysore- Yadavir.
ENGLISH SUMMARY…
No Left, No Right, Please teach history as it is: Yaduveer suggests
Mysuru, May 31, 2022 (www.justkannada.in): The row over school text books curriculum is being debated across the state drawing both appreciation and opposition. In the meantime, member of the Mysuru royal family Yaduveer Krishnadatta Chamaraja Wadiyar today said that history shall be taught as it is, without including leftist or rightist factors.
Speaking in Mysuru today, he observed that the children should be taught correct history and it shouldn’t be changed. “Curriculum should be included as per the current educational requirement,” he advised.
In his response over protecting the heritage structures in Mysuru city, he said that the tender process of protecting the heritage structures should change. “As per the present tender process, the structures should be razed down and reconstructed. I wish opportunity would be given to renovate the heritage structures without destroying it. The State and Central governments are not permitting for renovation. It should also change. The ayurveda hospital building has been renovated nicely. It is not only a heritage building, but is also useful for the people. It should become an example,” he observed.
Keywords: Yaduveer Wadiyar/ Heritage structures/