ಮೈಸೂರು, ಅಕ್ಟೋಬರ್,11,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್ ಟಿಎಂ ಶಾಲೆ ವಿವಾದ ಮತ್ತೆ ತಾರಕಕ್ಕೇರಿದ್ದು, ಎನ್ ಟಿಎಂ ಶಾಲೆ ಉಳಿಸಿ ಎಂದು ಆಗ್ರಹಿಸಿ ಮಹಾರಾಣಿ ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಎನ್ ಟಿಎಂ ಶಾಲೆ ಮರುನಿರ್ಮಾಣಕ್ಕಾಗಿ ಆಗ್ರಹಿಸಿ ಚಾಮರಾಜೇಂದ್ರ ವೃತ್ತದ ಬಳಿ ಮೋಹನ್ ಕುಮಾರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಬಾಲಕೃಷ್ಣ, ಉಗ್ರ ನರಸಿಂಹೇಗೌಡ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಎನ್ ಟಿಎಂ ಶಾಲೆ ಕೆಡವಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ರಾಮಕೃಷ್ಣ ಆಶ್ರಮ ಮುಂದಾಗಿದೆ. ಹೀಗಾಗಿ ಶಾಲೆ ಕೆಡವಿದ ಜಾಗದಲ್ಲಿ ಮರು ಶಾಲೆ ನಿರ್ಮಿಸಿ . ಶಾಲೆ ನಿರ್ಮಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕೊಟ್ಟ ಮಾತನ್ನ ಉಳಿಸಿಕೊಳ್ಳಿ ರಾಮಕೃಷ್ಣ ಮಠದವರೆ. ವಿವೇಕಾನಂದರ ಹೆಸರಲ್ಲಿ ಕನ್ನಡ ಸ್ಮಾರಕ ಕೆಡುವುದು ಸರಿಯೇ? ವಿವೇಕ ಸ್ಮಾರಕವಲ್ಲ..ಕನ್ನಡ ಶಾಲೆಯ ಸಮಾಧಿ. ಎನ್ ಟಿಎಂ ಶಾಲೆ ಉಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಎನ್ ಟಿಎಂ ಶಾಲೆ ರಾಜ್ಯದ ಮೊದಲ ಮಹಿಳಾ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ.
Key words: NTM –school- controversy –mysore-Kannada organizations- protest