ನವದೆಹಲಿ,ಜು,5,2019(www.justkannada.in): ವಿದ್ಯುತ್ ಪೂರೈಕೆಗಾಗಿ ಒನ್ ನೇಷನ್ ಒನ್ ಗ್ರಿಡ್ ಯೋಜನೆ ಜಾರಿಗೆ ತರಲಾಗುತ್ತದೆ. ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆ ಮೂಲಕ ವ್ಯಾಪಾರಿಗೆ ನೆರವು ನೀಡುವುದಾಗಿ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಷನ್ ನೀಡುತ್ತೇವೆ. ಇನ್ನು ವಿಶೇಷ ಆರ್ಥಿಕ ವಲಯಗಳ ಮೂಲಕ ಅಂತರಾಷ್ಟ್ರೀಯ ಉದ್ಯಮದಾರಿಗೆ ಅವಕಾಶ ನೀಡುವುದು. ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿರುವುದಾಗಿ ತಿಳಿಸಿದರು.
ಬಜೆಟ್ ನಲ್ಲಿನ ಮುಖ್ಯಾಂಶಗಳು ಹೀಗಿವೆ
ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆನಿರ್ಧಾರ, ಒನ್ ನೇಷನ್ ಒನ್ ಗ್ರಿಡ್ ಮೂಲಕ ವಿದ್ಯುತ್ ಸರಬರಾಜು. ಸರ್ಕಾರಿ ಮತ್ತುಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆಯೋಜನೆಗಳು. “ಉದಯ್” ಯೋಜನೆ ಮೂಲಕ ಅಡುಗೆ ಅನಿಲ ಸಾಗಾಟ ಸೌಕರ್ಯ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಷನ್ .
ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆ ಮೂಲಕ ವ್ಯಾಪಾರಿಗೆ ನೆರವು. ರೈಲ್ವೇ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ಅಗತ್ಯ. ಮೂಲಕ ಸೌಕರ್ಯ ಕ್ಷೇತ್ರದಲ್ಲಿ ಎಫ್ಟಿಐ, ಎಫ್ಪಿಐ ಹೂಡಿಕೆಗೆ ಆಧ್ಯತೆ.
ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವುದು ಸರ್ಕಾರದ ಕೆಲಸ. ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಲು ನಿರ್ಧಾರ. ಎಂಎಸ್ ಎಂಇ ಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ. ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ. ಎಫ್ ಟಿಐ ಉತ್ತೇಜಿಸಲು ಕೆವೈಸಿ ಸರಳೀಕರಣ.
Key words: One Nation -One Grid- Plan -Announced – Finance Minister- Nirmala Sitharaman.