ಕಲಬುರಗಿ,ಸೆ,17,2019(www.justkannada.in): ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಡೆದಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ ಪೀಠ ವಿಚಾರಣೆಯನ್ನು ಸೆಪ್ಟಂಬರ್ 26 ಕ್ಕೆ ಮುಂದೂಡಿದೆ.
ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದದ ಅಪರೇಷನ್ ಕಮಲ ಆಡಿಯೋ ಪ್ರಕರಣದ ವಿಚಾರಣೆ ಸೆಪ್ಟಂಬರ್ 26ಕ್ಕೆ ಮುಂದೂಡಿಕೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಬಿ.ಎಸ್ ಯಡಿಯೂರಪ್ಪ ಗುರುಮಿಟಕಲ್ ಶಾಸಕ ನಾಗನಗೌಡ ಪಾಟೀಲ್ ಅವರ ಮಗ ಶರಣಗೌಡ ಅವರಿಗೆ ಅಮಿಷ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದು ಆಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಬಿ.ಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ದ ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಮಧ್ಯಾಂತರ ತಡೆಯಾಜ್ಞೆ ತಂದಿದ್ದರು. ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕಲಬುರಗಿ ಹೈಕೋರ್ಟ್ ಪೀಠವಿಚಾರಣೆಯನ್ನ ಸೆಪ್ಟಂಬರ್ 26ಕ್ಕೆ ಮುಂದೂಡಿದೆ.
Key words: Operation kamala-Audio Case- Against -CM BS yeddyurappa- Postponement – hearing.