ಬೆಂಗಳೂರು,ಏಪ್ರಿಲ್,30,2021(www.justkannada.in): ನಾಳೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆಗಲ್ಲ. ಯಾರೂ ಆಸ್ಪತ್ರೆ ಬಳಿ ಹೋಗಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಈ ಕುರಿತು ಸ್ಪಷ್ಟನೆ ನಿಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಾಳೆ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಆಗಲ್ಲ. ಸಿರಮ್ ಇನ್ ಸ್ಟಿಟ್ಯೂಟ್ ನಿಂದ ಇನ್ನೂ ಲಸಿಕೆ ಬಂದಿಲ್ಲ. ಕಂಪನಿಗಳಿಂದ ಲಸಿಕೆ ಪೂರೈಕೆ ಆಗಬೇಕಿದೆ. ಲಸಿಕೆ ಪೂರೈಕೆ ಬಗ್ಗೆ ಇನ್ನು ಮಾಹಿತಿ ಬಂದಿಲ್ಲ. ಲಸಿಕೆ ಪೂರೈಕೆಯಾದ ಬಳಿಕ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ ನಂತರ ಲಸಿಕೆ ನೀಡಲಾಗುವುದು ಎಂದರು.
ಅದ್ದರಿಂದ ಕೊರೊನಾ ಲಸಿಕೆ ಪಡೆಯಲು ನಾಳೆಯಿಂದ 18-44 ವರ್ಷದವರೆಗಿನ ಯಾರೂ ಆಸ್ಪತ್ರೆ ಬಳಿ ಹೋಗುವುದು ಬೇಡ. 45 ವರ್ಷ ಮೇಲ್ಪಟ್ಟವರಿಗೆ ಯಥಾಸ್ಥಿತಿಯಲ್ಲಿ ಲಸಿಕೆ ನೀಡಿಕೆ ಮುಂದುವರೆಯಲಿದೆ. ಇನ್ನು 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗೆ ಆರ್ಡರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ENGLISH SUMMARY….
COVID vaccination for people between 18-45 years of age: Health Minister Dr. K. Sudhakar requests not to visit hospitals tomorrow
Bengaluru, Apr. 30, 2021 (www.justkannada.in): The government had announced that COVID vaccination will be available for all citizens between 18 and 45 years of age from tomorrow i.e., May 1, 2021. But the Health and Medical Education Minister Dr. K. Sudhakar has appealed to the people of the state not to visit the hospitals for vaccination tomorrow.
Speaking about this in Bengaluru today the Minister Dr. K. Sudhakar informed that COVID vaccination is still not available for people between 18-45 years of age as the Serum Institute has still not supplied it. “We still have to receive the vaccines from the companies. We have not received any information from them. Hence, we request the people to visit the hospitals to get the vaccination only after the government issues official orders,” he clarified.
He also informed the Govt. of Karnataka that has requested to supply 1 crore doses of the COVID vaccination.
Keywords: Health Minister Dr. K. Sudhakar/ COVID vaccination/ 18-45 years/ vaccine not available/ please do not visit hospital
Key words: over-18 age-will not – –vaccinated- tomorrow-Health Minister -K Sudhakar