ನವದೆಹಲಿ,ಜನವರಿ,31,2023(www.justkannada.in): ಆತ್ಮ ನಿರ್ಭರ ಯೋಜನೆಯಡಿ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು ಯುವಕರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು.
ಇಂದು ಸಂಸತ್ ನಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಬಜೆಟ್ ಅಧಿವೇಶನ ಉದ್ದೇಶೀಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ. ಹಲವು ವಿಷಯಗಳಲ್ಲಿ ಸರ್ಕಾರ ಸಾಧನೆ ಮಾಡಿದೆ. ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಯೋಜನೆ ಜಾರಿ, ಬಡತನ ನಿರ್ಮೂಲನೆಗೆ ಸರ್ಕಾರದಿಂದ ನಿರಂತರ ಕ್ರಮ ಕೈಗೊಂಡಿದೆ. 50 ಕೋಟಿ ಬಡವರಿಗೆ ಉಚಿತ ವಿಮಾ ಯೋಜನೆ, 50 ಕೋಟಿ ಬಡವರಿಗೆ ಆರೋಗ್ಯ ಕಾರ್ಡ್, ರೈತರ ಅಭಿವೃದ್ದಿಗಾಗಿ ಹಲವು ಯೋಜನೆ ಜಾರಿ ಮಾಡಿಲಾಗಿದೆ. ಕಿಸಾನ್ ಸಮ್ಮಾನ್ , ಕಿಸಾನ್ ಕಾರ್ಡ್ ವಿತರಣೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭ್ರಷ್ಟಾಚಾರ ಮಾರಕವಾಗಿದೆ ಭ್ರಷ್ಟಾಚಾರ ನಿರ್ಮೂಲನೆಗೆ ದಿಟ್ಟ ಕ್ರಮವನ್ನ ಕೈಗೊಂಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಂಡಿದೆ. ಈ ಮೂಲಕ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನ ಜಾರಿ ಮಾಡಿದೆ ಎಂದು ಶ್ಲಾಘಿಸಿದರು.
ಈ ವರ್ಷ ಭಾರತಕ್ಕೆ ತುಂಬಾ ವಿಶೇಷವಾಗಿದೆ ಭಾರತ. ಅಮೃತ ಮಹೋತ್ಸವವನ್ನ ಆಚರಿಸುತ್ತಿದೆ. ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯತ್ನ ನಡೆದಿದೆ.. ಸುವರ್ಣ ಭವಿಷ್ಯದ ಸಂಕಲ್ಪ ಮಾಡಿದೆ. 2047ರವರೆಗೆ ದೇಶದ ಭವಿಷ್ಯ ನಿರ್ಧರಿಸುವ ಯೋಜನೆ ಹಾಕಲಾಗಿದೆ. ಅಭಿವೃದ್ಧಿಯ ಕರ್ತವ್ಯ ಪಥದಲ್ಲಿ ಭಾರತ ಸಾಗುತ್ತಿದೆ. ಈ ಹಿಂದೆ ಭಾರತ ಸಮಸ್ಯೆ ಬಗೆಹರಿಸಲು ವಿಶ್ವದ ಬಳಿ ನೆರವು ಕೇಳುತ್ತಿತ್ತು. ಈಗ ವಿಶ್ವದ ಹಲವು ದೇಶಗಳು ಭಾರತದ ನೆರವು ಕೇಳುತ್ತಿದೆ ಭ್ರಷ್ಟಾಚಾರದಿಂದ ದೇಶಕ್ಕೆ ಮುಕ್ತಿ ಸಿಗುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯಡಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಬಸವೇಶ್ವರರ ಕಾಯಕವೇ ಕೈಲಾಸ ಎಂಬ ಮಾತಿನಂತೆ ಸರ್ಕಾರ ಕರ್ತವ್ಯ ನಿಭಾಯಿಸುತ್ತಿದೆ. ಭ್ರಷ್ಟಾಚಾರವು ನಮ್ಮ ಪ್ರಜಾತಂತ್ರ ಮತ್ತು ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರು ಎಂಬುದು ನನ್ನ ಸರ್ಕಾರದ ಸ್ಪಷ್ಟ ಅಭಿಪ್ರಾಯ. ಕಳೆದ ಕೆಲ ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ. ಪ್ರಾಮಾಣಿಕರಿಗೆ ನಮ್ಮ ವ್ಯವಸ್ಥೆಯಲ್ಲಿ ಗೌರವ ಸಿಗುವುದನ್ನು ಖಾತ್ರಿಪಡಿಸುತ್ತಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆ ಬಹಳಷ್ಟು ಬಡಬಗ್ಗರನ್ನು ಸಂಕಷ್ಟದಿಂದ ಪಾರು ಮಾಡಿದೆ. ಆರೋಗ್ಯ ಪಾಲನೆಗೆ ಅವರು ವ್ಯಯಿಸುತ್ತಿದ್ದ ಸಾವಿರಾರು ಕೋಟಿ ರೂ ಉಳಿತಾಯವಾಗಲು ಸಾಧ್ಯವಾಗಿದೆ.. ನಮ್ಮ ಸರ್ಕಾರ ಸಮಾಜದ ಪ್ರತಿಯೊಂದು ವರ್ಗಕ್ಕೂ ಯಾವುದೇ ಭೇದವಿಲ್ಲದೇ ಕೆಲಸ ಮಾಡಿದೆ. ಇದರ ಪರಿಣಾಮವಾಗಿ ಮೂಲ ಸೌಕರ್ಯಗಳು ಬಹುತೇಕ ಎಲ್ಲಾ ಜನರನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
Key words: Parliament- Budget –Session-president- Draupadi Murmu