ಮೈಸೂರು,ಮಾರ್ಚ್,26,2021(www.justkannada.in) : ಭೂತ ಹಾಗೂ ವರ್ತಮಾನ ಕಾಲದ ಆಧಾರದ ಮೇಲೆ ಭವಿಷ್ಯದ ಕುರಿತು ಆಲೋಚಿಸಬೇಕಿದೆ. ಕೆಲವರದು ಏಕಲವ್ಯನಂತಹ ಹೋರಾಟವಾಗಿದ್ದು, ಬಹುತೇಕರಿಗೆ ಭವಿಷ್ಯದ ಕುರಿತಂತೆ ಸಲಹೆ, ಮಾರ್ಗದರ್ಶನ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರಜಾವಾಣಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿದ್ದ “ಭವಿಷ್ಯದ ದಾರಿ” ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪೋಷಕರು ವಿದ್ಯಾವಂತರಾಗಿದ್ದಾರೆ. ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಮಕ್ಕಳ ಬದುಕನ್ನು ಉತ್ತಮವಾಗಿ ರೂಪಿಸುವುದಕ್ಕೆ ಎಲ್ಲಾ ಪೋಷಕರು ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದದೊಂದಿಗೆ ಭವಿಷ್ಯದ ಉದ್ಯೋಗದ ಬಗ್ಗೆ ಅರಿವಿರಬೇಕು ಎಂದರು.
ಉತ್ತಮ ಶಿಕ್ಷಣದ ಜೊತೆಗೆ ಕೌಶಲ್ಯಗಳು ಬಹಳ ಮುಖ್ಯವಾಗಿದೆ. ಮೈಸೂರು ವಿವಿಯು ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಜೀವನದಲ್ಲಿ ಸೋತಾಗ ಹೆದರದೇ, ಮುನ್ನುಗ್ಗುವುದನ್ನು ಕಲಿಯಬೇಕು. ಒಂದು ಬಾರಿ ಸೋತ ಮಾತ್ರಕ್ಕೆ ಜೀವನ ಕೊನೆಯಾಯಿತು ಎಂದು ಭಾವಿಸುವುದು ತಪ್ಪು. ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿ ಆಲೋಚಿಸುವ ಮೂಲಕ ವಿಶ್ವಾಸದಿಂದಿರಬೇಕು ಎಂದು ತಿಳಿಸಿದರು.ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಆರ್ಥಿಕ, ಆರೋಗ್ಯದಂತಹ ಅನೇಕ ಸಂಕಷ್ಟಗಳು, ಆತಂಕದ ನಡುವೆಯೂ ಭವಿಷ್ಯದ ಕುರಿತು ಯುವಕರನ್ನು ಜಾಗೃತಿಗೊಳಿಸಬೇಕಿದೆ ಎಂದರು.
ಶಿಕ್ಷಕರಿಂದ ಕಲಿತ ಪಾಠಗಳು ಹಾಗೂ ಸಮಾಜ ಕಲಿಸಿದ ಪಾಠಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರತಿಯೊಂದು ತಲೆಮಾರಿಗೆ ಜವಾಬ್ದಾರಿಗಳು ರವಾನೆಯಾಗುತ್ತವೆ. ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಮುಂದಿನ ಪೀಳಿಗೆಗೂ ನೆಮ್ಮದಿಯಾಗಿ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ಮಾತನಾಡಿ, ಶಿಕ್ಷಣ ಎನ್ನುವುದು ಪ್ರಯಾಣ ಆರಂಭಿಸಿದಂತೆ ಭವಿಷ್ಯದ ಬಗ್ಗೆ ಕಲ್ಪನೆಯಿದ್ದವರೂ ಮಾತ್ರವೇ ಈ ಪ್ರಯಾಣವನ್ನು ಸರಿಯಾದ ರೀತಿಯಲ್ಲಿ ರೂಪಿಸುವರು. ಇಲ್ಲವಾದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಶಿಕ್ಷಕರಿಗೆ ವಿದ್ಯಾರ್ಥಿಗಳ ಆತಂಕಗಳ ಬಗ್ಗೆ ಅರಿವಿರಬೇಕು. ಇಲ್ಲವಾದರೆ, ಕೇವಲ ಪಠ್ಯವನ್ನು ಮಾತ್ರವೇ ಬೋಧನೆ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸೋಲುಗಳು ಎದುರಾದಾಗ ಅದನ್ನು ಎದುರಿಸಿ ಬದುಕುವುದಕ್ಕೆ ಕೌಶಲ್ಯಗಳು ಬಹಳ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಮೈಸೂರು ಟಾರ್ಪಲೀನ್ಸ್ ಮಾಲೀಕ ವೈ.ವೀರಭದ್ರ, ನವೋದಯ ಫೌಂಡೇಶನ್ ಡಾ.ಎಸ್.ಆರ್.ರವಿ ಇತರರು ಉಪಸ್ಥಿತರಿದ್ದರು.
ENGLISH SUMMARY….
Future plans should be based on past and present situations: UoM VC
Mysuru, Mar. 26, 2021 (www.justkannada.in): “We should think about the future based on the past and present situations. The struggles of a few persons are like that of Ekalvya. However, a majority of the people require suggestions and guidance concerning their future,” opined Prof. G. Hemanth Kumar, Vice-Chancellor, University of Mysore.
He was speaking at a workshop on the topic “Way forward”, organized by the Prajavani and the University of Mysore, held at the Senate Bhavan, in Manasagangotri today.
In his address, he said, “Today parents are educated and they will provide good education to their children. All the parents try to provide a good future to their wards. Along with getting an education, the students should be aware of future job requirements. Today along with good education, it is very important to possess skills. In this context, the University of Mysore is running several programs keeping in mind the future of the students.”
He called upon the students not to lose hope if they fail in achieving their goals once or twice and asked them to think positively and be confident.
Prof. R. Shivappa, Register, University of Mysore expressed his view that today there is a need of creating awareness among the youth about their future, amidst all the present economical and health conditions that are happening in the country.
Educationist Gururaj Karjagi inaugurated the program. “Education is like a journey. Those who have a clear aim and thought about their future only can reach their goal, otherwise, they may have to face lot of problems,” he said.
Sri Ravindra Bhat, Executive Editor, Prajavani, Y. Veerabhadra, Proprietor, Mysuru Tarupaulins, Dr. S.R. Ravi, of Navodaya Foundation were present on the occasion.
Keywords: University of Mysore/ Workshop/ Way Forward/ Gururaj Karjagi
key words : Past-Present-time-Future-thinking-basis-Chancellor-Prof.G.Hemant Kumar