ಯಾವುದೇ ಕಾರಣಕ್ಕೂ ಪ್ರಜ್ವಲ್ ಕ್ಷಮೆಗೆ ಅರ್ಹನಲ್ಲ: ಕಟ್ಟು ನಿಟ್ಟಾಗಿ ತನಿಖೆಯಾಗಲಿ-ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಜೂನ್,1,2024 (www.justkannada.in):  ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಯಾವುದೇ ಕಾರಣಕ್ಕೂ ಕ್ಷಮೆಗೆ ಅರ್ಹನಲ್ಲ. ಪೆನ್ ಡ್ರೈವ್ ಪ್ರಕರಣದಲ್ಲಿ ಕಟ್ಟುನಿಟ್ಟಾಗಿ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಜ್ವಲ್ ರೇವಣ್ಣ ಯಾವ ಕಾರಣಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ. ಪ್ರಜ್ವಲ್ ರೇವಣ್ಣ ಈವರೆಗೆ ನಡೆದುಕೊಂಡ ರೀತಿ ಅಕ್ಷಮ್ಯ. ಸಂತ್ರಸ್ತರ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಆದರೆ, ಇದೊಂದು ಘನಘೋರ ಕೃತ್ಯ. ಯಾವುದೇ ಕಾರಣಕ್ಕೂ ಪ್ರಜ್ವಲ್ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ಎಸ್ ಐಟಿ ಕಸ್ಟಡಿಗೆ ನಿಡಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಇದೊಂದು ಗಂಭೀರ ಪ್ರಕರಣ ಮಹಿಳೆಯರಿಗೆ ನಾವು ಗೌರವ ನೀಡುತ್ತೇವೆ.  ಹೀಗಾಗಿ ತ್ವರಿತ ಗತಿಯಲ್ಲಿ ತನಿಖೆ ಮುಗಿಸಿ ಶಿಕ್ಷೆಯಾಗಲಿ ಎಂದರು.

ಎಸ್ ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ, ನಿಗಮದಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಬ್ಯಾಂಕ್ ಮೂಲಕ ಎಲ್ಲಾ ವ್ಯವಹಾರ ಆಗಿದೆ. ಅವರು ಏನೇನು ಮಾಡಬೇಕು ಅದನ್ನ ಪ್ರಯತ್ನಿಸುತ್ತಿದ್ದಾರೆ. ಆದ್ರೂ ಸಾಕ್ಷಿ ನಾಶ ಬೆದರಿಸುವ ಕೆಲಸ ಆಗುತ್ತಿದೆ ಪ್ರಕರಣ ತನಿಖೆ ಸಿಬಿಐಗೆ ವಹಿಸಬೇಕು.  ಬಿ. ನಾಗೇಂದ್ರ ರಾಜೀನಾಮೆ ಕೊಡಬೇಕು ಬಂಧಿಸಬೇಕು ಎಂದು ಒತ್ತಾಯಿಸಿದರು.

Key words: Prajwal  Revanna, case, investigation, Prahlad Joshi