ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಇವಾಗ ಸಿಗ್ತರಾ ?!: ಮಾಜಿ ಸಿಎಂ ಎಚ್ಡಿಕೆ

ಮೈಸೂರು, ಮೇ 16, 2024 (www.justkannada.in): ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ,  ಇವಾಗ ಸಿಗ್ತರಾ? ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮೊದಲಿನಿಂದಲೂ ನನ್ನ ಸಂಪರ್ಕದಲ್ಲಿ ಇಲ್ಲ. ಈ ಪ್ರಕರಣ ಆಗುವ ಹಿಂದೆಯೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಇನ್ನೂ ವಿದೇಶಕ್ಕೆ ಹೋದ ಮೇಲೆ ಹೇಗೆ ನನ್ನ ಸಂಪರ್ಕದಲ್ಲಿ ಇರುತ್ತಾರೆ‌. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಎಚ್.ಡಿಕೆ ಹೇಳಿದರು.

ತಿಮಿಂಗಲ ಗೃಹ ಸಚಿವ ಪರಮೇಶ್ವರ ಅವರ ಪಕ್ಕದಲ್ಲೇ ಕುಳಿತಿದೆ. ತಿಮಿಂಗಲ ಯಾರು ಅನ್ನೋದು ಪರಮೇಶ್ವರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ತಿಮಿಂಗಲವನ್ನ ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೇ ಹೇಗೆ? ಎಸ್.ಐ.ಟಿಯನ್ನ ಕಾಣದ ಕೈ ನಿಯಂತ್ರಿಸುತ್ತಿದೆ. ಅವರದೇ ಮಂಡ್ಯ ಶಾಸಕ ಒಂದು ವಾರದಲ್ಲಿ ತಿಮಿಂಗಲ ಸಿಗುತ್ತೆ ಅಂಥ ಹೇಳಿದ್ದರು, ಅದು ಏನಾಯಿತು? ಎಂದು ಪ್ರಶ್ನಿಸಿದ ಎಚ್ಡಿಕೆ ತಿಮಿಂಗಲವನ್ನ ಕುಮಾರಸ್ವಾಮಿ ನುಂಗಿಕೊಳ್ಳಲಿ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.

ಸಮಯ ಬರಲಿ ನುಂಗಿದರೇ ಆಯಿತು. ಎಸ್ಐಟಿ ಅಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ಕೊಡುತ್ತಿಲ್ಲ. ಬೇರೆಯವರಿಗೆ ಮಾಹಿತಿ ಕೊಡುತ್ತಿದ್ದಾರೆ. ಎಸ್ಐಟಿ ತನಿಖೆ ಸರಿಯಾಗಿ ಅಗುತ್ತಿಲ್ಲ ಎಂದು ದೂರಿದರು. ಎಸ್ಐಟಿ ಕಿರಿಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ ಎಚ್ಡಿಕೆ. ನಿಮ್ಮ ತಂದೆ ತಾಯಿ ಸಹೋದರ ಸಹೋದರಿಯ ಮುಖ ನೋಡಿ ಕೊಂಡು ತನಿಖೆ ಮಾಡಿ. ನೊಂದ ಹಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ ಎಂದರು.