ಮೈಸೂರು,ಮೇ,4,2021(www.justkannada.in): ಕೊರೋನಾ ಸೋಂಕು ತಗುಲಿದ್ಧ ಗರ್ಭಿಣಿಗೆ ಹೆರಿಗೆ ಮಾಡಿಸಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಎಚ್ ಡಿ ಕೋಟೆ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ಹೆಣ್ಣು ಮಗುವಿಗೆ ಸೋಂಕಿತ ಮಹಿಳೆ ಜನ್ಮ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಶ್ರೀನಿವಾಸ್ ಮತ್ತು ಸಿಬ್ಬಂದಿಗಳ ನೆರವಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದ ಸೊಂಕಿತ ಮಹಿಳೆ. ಸೋಂಕು ದೃಢಪಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆ ಗೆ ಹೋಗಲು ಖಾಸಗಿ ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಸೋಮವಾರ ತಡರಾತ್ರಿ ಗರ್ಭಿಣಿ ಮಹಿಳೆಯೊಡನೆ ಗರ್ಭಿಣಿ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ಬಂದು ತುರ್ತು ವಾಹನಕ್ಕಾಗಿ ಒತ್ತಾಯಿಸಿದ್ದರು.
ಗರ್ಭಿಣಿ ಸ್ಥಿತಿ ಅರಿತು ಅರ್ಧತಾಸಿನಲ್ಲಿ ಹೆರಿಗೆಯಾಗುವ ಲಕ್ಷಣ ಅರಿತ ವೈದ್ಯರು, ಜಿಲ್ಲಾಸ್ಪತ್ರೆಗೆ ರವಾನಿಸಲು ಸಮಯ ಅಭಾವ ಅರಿತ ವೈದ್ಯರು ,ಸಿಬ್ಬಂದಿಗಳು ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಂತರಾಗಿದ್ದಾರೆ. ಸೋಂಕಿತರ ವಾರ್ಡ್ ಗೆ ತಾಯಿ ಮಗು ಸ್ಥಳಾಂತರ ಮಾಡಲಾಗಿದೆ.
Key words: Pregnant – coronavirus- infection- Government hospital -staff – sense of duty-HD kote