ನವದೆಹಲಿ ಮಾ 5,2020(www.justkannada.in): ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದ ನಿಯೋಗದಿಂದ ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ ಮಿತಾಶ್ ಅವರು ನಿಯೋಗವನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಕನ್ನಡ ಅನುಷ್ಠಾನದ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗವು ನೀಡಿತು.
ಕರ್ನಾಟಕ ಭವನದ ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿ, ಅಗತ್ಯ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಶ್ರೀ ಗುರುರಾಜ್ ಕರ್ಜಗಿ, ರಂಗಕರ್ಮಿ ಹಾಗು ಚಲನಚಿತ್ರ ನಿರ್ದೇಶಕ ಶ್ರೀ ಪ್ರಕಾಶ ಬೆಳವಾಡಿ, ಶಿಕ್ಞಣ ತಜ್ಞ ಡಾ.ನಿರಂಜನ ಆರಾಧ್ಯ, ಲೇಖಕ ಶ್ರೀ ರಾ.ನಂ.ಚಂದ್ರಶೇಖರ್, ಕನ್ನಡ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಶ್ರೀ ಸಿದ್ದಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ್, ಪ್ರಾಧಿಕಾರದ ಎಂ. ಶಿವಪ್ರಕಾಶ ನಿಯೋಗದಲ್ಲಿದ್ದರು.
ಈ ಸಂದರ್ಭ ವಿಶೇಷ ನಿವಾಸಿ ಆಯುಕ್ತರಾದ ಮೀರಾ ಶ್ರೀವಾತ್ಸವ, ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತ ಹೆಚ್. ಪ್ರಸನ್ , ಉಪ ನಿವಾಸಿ ಆಯುಕ್ತ ಬಿ.ವಿ.ವಿಠ್ಠಲ, ಕರ್ನಾಟಕ ಭವನದ ಅಧಿಕಾರಿ; ಸಿಬ್ಬಂದಿಯವರು ಉಪಸ್ಥಿತರಿದ್ದರು.
Key words: Progress- review- meeting -Kannada Development Authority- delegation – Karnataka Bhavan.