ಬೆಂಗಳೂರು,ಸೆಪ್ಟಂಬರ್,9,2021(www.justkannada.in): ಗಣೇಶೋತ್ಸವ ಮಾರ್ಗಸೂಚಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಬಿಬಿಎಂಪಿ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ.
ಹೌದು ಇದೀಗ ಗಣೇಶೋತ್ಸವ ಮಾರ್ಗಸೂಚಿ ಮತ್ತೆ ಬದಲು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಂಗಳೂರಿಗೆ ಪರಿಷ್ಕೃತ ಮಾರ್ಗಸೂಚಿ ರಿಲೀಸ್ ಮಾಡಲಾಗಿದ್ದು, ರಸ್ತೆ ಮೈದಾನಗಳಲ್ಲಿ ಗಣೇಶ ಕೂರಿಸಲು ಅವಕಾಶ ನೀಡಲಾಗಿದೆ. 3 ದಿನಕ್ಕೆ ಸೀಮಿತವಾಗಿದ್ದ ಮಾರ್ಗಸೂಚಿಯನ್ನ ಕೈಬಿಟ್ಟು 10 ದಿನಗಳ ಕಾಲ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಲಾಗಿದೆ.
ಅಲ್ಲದೆ ಬೇಡಿಕೆ ಬಂದ್ರೆ ವಾರ್ಡ್ ನಲ್ಲಿ ಒಂದಕ್ಕಿಂತ ಹೆಚ್ಚು ಗಣಪತಿ ಕೂರಿಸಲು ಅನುಮತಿ ನೀಡಲಾಗಿದೆ. ಇನ್ನು 4ಅಡಿಗಿಂತ ಹೆಚ್ಚು ಎತ್ತರ ಗಣಪತಿ ಪ್ರತಿಷ್ಟಾಪಿಸಬಹುದು. ಗಣೇಶ ಪ್ರತಿಷ್ಟಾಪನೆಗೆ ಪೊಲೀಸರ ಅನುಮತಿ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಸರ್ಕಾರ ಗಣೇಶೋತ್ಸವ ನಿಯಮ ಬದಲಿಸಿದ ಹಿನ್ನೆಲೆ ಗಣೇಶ ಉತ್ಸವ ಸಮಿತಿ, ಗಣೇಶ ತಯಾರಕರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
Key words: protest -Hindu –organizations-Ganeshotsava –rules-change-bangalore