Home Election 2024 ಅಂದು ಐಎಎಸ್ ಅಧಿಕಾರಿ ಈಗ ರಾಜಕಾರಣಿ: ಮೊದಲ ಪ್ರಯತ್ನದಲ್ಲೇ ಜಿ.ಕುಮಾರ್‌ ನಾಯಕ್‌ ಜಯಭೇರಿ.  

ಅಂದು ಐಎಎಸ್ ಅಧಿಕಾರಿ ಈಗ ರಾಜಕಾರಣಿ: ಮೊದಲ ಪ್ರಯತ್ನದಲ್ಲೇ ಜಿ.ಕುಮಾರ್‌ ನಾಯಕ್‌ ಜಯಭೇರಿ.  

ರಾಯಚೂರು,ಜೂನ್,4,2024 (www.justkannada.in): ಯಾವುದೇ ವಿವಾದಗಳಿಲ್ಲದೆ ಐಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿವೃತ್ತರಾಗಿದ್ದ ಜಿ.ಕುಮಾರ್ ನಾಯಕ್ ಇದೀಗ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಹೌದು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್‌ ನಾಯ್ಕ ಅವರನ್ನ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿವೃತ್ತ ಐಎಎಸ್‌‍ ಅಧಿಕಾರಿ ಜಿ.ಕುಮಾರ್‌ ನಾಯಕ್‌  ಜಯಭೇರಿ ಬಾರಿಸಿದ್ದಾರೆ.

ನಿವೃತ್ತ ಐಎಎಸ್‌‍ ಅಧಿಕಾರಿ ಜಿ.ಕುಮಾರ್‌ ನಾಯಕ್‌ ತಮ್ಮ ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಐಎಎಸ್‌‍ ಅಧಿಕಾರಿಯಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಕುಮಾರ್‌ ನಾಯಕ್‌ ಸಾಕಷ್ಟು ಹೆಸರು ಮಾಡಿದ್ದರು. ರಾಯಚೂರು ಲೋಕಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್‌ ನಾಯ್ಕ ಅವರ ವಿರುದ್ಧ ಕುಮಾರ್‌ ನಾಯಕ್‌ಶೇ.52ರಷ್ಟು ಮತ ಪಡೆದುಕೊಂಡು  ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಕುಮಾರ್‌ ನಾಯಕ್‌ ಕಾಂಗ್ರೆಸಿಗರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುವ ಮೂಲಕ  ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Key words: Raichur, IAS Officer, G. Kumar Naik, win