ಮೈಸೂರು. ಜುಲೈ. 17.(www.justkannada.in) ಜನ ಪ್ರತಿನಿಧಿಗಳು ಜನರ ಕಾರ್ಯಗಳ ಬಗ್ಗೆ ಗಮನವಹಿಸದೆ ಬೇಬಿ ಬೆಟ್ಟ ಮುಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ಎಸ್.ಆರ್.ಹಿರೇಮಠ ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಸ್.ಆರ್ ಹಿರೇಮಠ್, ಕೆಆರ್ ಎಸ್ ಆಣೆಕಟ್ಟೆ ಸುತ್ತಮುತ್ತ ಆಕ್ರಮ ಗಣಿಗಾರಿಕೆ ವಿಚಾರವಾಗಿ ಜನ ಪ್ರತಿನಿಧಿಗಳು ಬೇಬಿ ಬೆಟ್ಟ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಸುಪ್ರೀಂಕೋರ್ಟ್ ಒಂದು ವರ್ಷಗಳ ಕಾಲ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತು. ಹಾಗೆಯೇ ಕೆ.ಆರ್.ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯ ಜನರು ಜಾಗೃತರಾಗಬೇಕು. ಗಣಿ ಮಾಲೀಕರಿಂದ ರಾಜಕಾರಣಿಗಳು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಎಸ್.ಆರ್ ಹಿರೇಮಠ್ ಆರೋಪಿಸಿದರು.
ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, 2ನೇ ಅಲೆ ಸುನಾಮಿಯಾಗಿ ಬಂದಿದ್ದರಿಂದ ಸುಮಾರು ಲಕ್ಷ ಜನ ಮರಣ ಹೊಂದಿದ್ದಾರೆ. ಇಂತಹ ಪರಿಸ್ಥಿತಿ ನಿಭಾಯಿಸದೇ ಕೇಂದ್ರ ಸರ್ಕಾರ ಜನರ ಕೊಲೆ ಮಾಡುತ್ತಿದೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದರು.
Key words: Representatives – baby hill-KRS-illegel-mining- mysore-SR Hiremath