ಬೆಂಗಳೂರು,ಜು,3,2019(www.justkannada.in): ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷ ಟಾಂಗ್ ನೀಡಿರುವ ಸ್ಪೀಕರ್ ರಮೇಶ್ ಕುಮಾರ್, ಸಮಯ ಇದ್ರೆ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ನನಗೆ ಪರಮಾಧಿಕಾರ ಇಲ್ಲ . ಜವಾಬ್ದಾರಿ ಇದೆ. ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ಕೊಡ್ಬೇಕು. ಹೇಗೆ ಕೊಡಬೇಕು ಅನ್ನೊದು ಅರಿವಿರಬೇಕು. ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ಕೊಟ್ಟಿದ್ದಾರೆ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ ಅಂದ್ರೆ ಬೇರೆ ಉದ್ದೇಶವಿದೆ. ನಾನು ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದರು.
ಒಬ್ಬ ಶಾಸಕ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅದನ್ನು ಪರಿಶೀಲಿಸುತ್ತೇನೆ, ಜನರಿಗೆ ಶಾಸಕರ ವರ್ತನೆ ಇಷ್ಟ ಆಗದಿದ್ದಲ್ಲಿ ಅವರನ್ನ ತಿರಸ್ಕರಿಸುವ ಅವಕಾಶ ಸಂವಿಧಾನದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾಗಿದೆ. ಯಾರೂ ಬೇಕಾದರೂ ಶಾಸಕರ ವಿರುದ್ದ ದೂರು ನೀಡಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
Key words: resign -Anand Singh – Speaker- Ramesh Kumar- Indirect -tong