ಬೆಂಗಳೂರು,ಅಕ್ಟೋಬರ್,1,2021(www.justkannada.in): ಪ್ರಸ್ತುತ ಭಾಷಾಂತರ ನಿರ್ದೇಶನಾಲಯದ ರಾಜಭಾಷಾ (ವಿಧಾಯಿ) ಆಯೋಗದ ಅಧ್ಯಕ್ಷರು, ಧಾರ್ಮಿಕ ದತ್ತಿ ಇಲಾಖೆಯ ಜುಡಿಷ್ಯಯಿಲ್ ವಿಭಾಗದ ಮುಖ್ಯಸ್ಥರು, ಜಿಲ್ಲಾ ನಿವೃತ್ತ ನ್ಯಾಯಾಧೀಶರಾಗಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಮಹಿಪಾಲರಾವ್ ಶಿವಶಂಕರರಾವ್ ದೇಸಾಯಿ (77) ಗುರುವಾರದಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ದೇಸಾಯಿ ಮನೆತನದ ಹಿರಿಯಕೊಂಡಿ, ಗಾಂಧಿವಾದಿ ಸರಳ ಸಹೃದಯ ಸಾಹಿತಿ, ಭಾಷಾಂತರಕಾರರು ಆಗಿದ್ದ ಮಹಿಪಾಲರಾವ್ ದೇಸಾಯಿ ಅವರು, 1978 ರಲ್ಲಿ ಮುನ್ಸಿಫ್ ಆಗಿ ನೇಮಕಗೊಂಡು, ಜಿಲ್ಲಾ ನ್ಯಾಯಾಧೀಶರಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದು, ಲೋಕಾಯುಕ್ತದಲ್ಲಿಯೂ ಕೆಲ ವರ್ಷಗಳ ಸೇವೆಯನ್ನು ಸಲ್ಲಿಸಿರುವರು, ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆಯ ಜುಡಿಷ್ಯಯಿಲ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಭಾಷಾಂತರ ನಿರ್ದೇಶನಾಲಯದ ರಾಜಭಾಷಾ (ವಿಧಾಯಿ) ಆಯೋಗದ ಅಧ್ಯಕ್ಷರು ಆಗಿದ್ದರು.
ನ್ಯಾಯಾಧೀಶರಾಗುವ ಮೊದಲು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಾರ್ವಜನಿಕ ಸೇವಾಕಾರ್ಯದಲ್ಲಿದ್ದರು, ಶಿರಡಿ ಸಾಯಿಬಾಬಾ ಅವರ ಪರಮಭಕ್ತರಾಗಿದ್ದ ಅವರು, ಯಲಬುರ್ಗಾ ಪಟ್ಟಣದಲ್ಲಿ ಸಾಯಿ ಮಂದಿರ ನಿರ್ಮಾಣವನ್ನು ಮಾಡುವ ಮಹತ್ವದ ಕಾರ್ಯದಲ್ಲಿದ್ದರು.
ಮಹಿಪಾಲರಾವ್ ದೇಸಾಯಿ ಅವರು ಅಪಾರ ಜ್ಞಾನ, ಹಾಗೂ ಭಾಷಾಂತರದಲ್ಲಿ ಪರಿಣಿತರು, ರಾಷ್ಟ್ರಕವಿ ರವೀಂದ್ರನಾಥ ಠಾಗೋ ಅವರು ಬರೆದ ಗೀತಾಂಜಲಿ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿರುವರು. ಹಲವು ಸಾಹಿತ್ಯಿಕ ಪುಸ್ತಕ, ಕವನಗಳನ್ನು ಬರೆದಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿ.ಲಿಂಗರಾಜ ದೇಸಾಯಿಯವರ ಮೂರನೇ ಸಹೋದರರು, ರಾಜಕೀಯವಾಗಿ ಹೆಚ್ಚು ಆಸಕ್ತಿ ಇದ್ದರು, ಕೊನೆಗೂ ಇವರು ಆಯ್ಕೆ ಮಾಡಿಕೊಂಡಿದ್ದು ನ್ಯಾಯಾಂಗವನ್ನು ಎಂದು ದೇಸಾಯಿಯವರ ಒಡನಾಡಿ ಹಿರಿಯ ನ್ಯಾಯವಾದಿ ಬಿ.ಎಂ.ಶಿರೂರು ಅವರು ಸ್ಮರಿಸಿಕೊಂಡಿರುವರು.
ಶುಕ್ರವಾರ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ:
ನಿಧನರಾದ ಮಹಿಪಾಲರಾವ್ ದೇಸಾಯಿಯರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಶುಕ್ರವಾರದಂದು ಜರುಗಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿರುವರು, ಗಣ್ಯರ ಕಂಬನಿ : ಮಹಿಪಾಲರಾವ್ ದೇಸಾಯಿವರ ನಿಧನಕ್ಕೆ ಜಿಲ್ಲೆಯ ಗಣ್ಯರು, ನ್ಯಾಯವಾದಿಗಳು, ಅವರ ಬಂಧು-ಬಳಗ, ಅಪಾರ ಅಭಿಮಾನಿಗಳು ಕಂಬನಿಯನ್ನು ಮೀಡಿದಿದ್ದಾರೆ.
Key words: Retired -District Judge President – Rajbhasha (Widow) –Commission–Mahipalarao S. Desai-passed away.