ಬೆಂಗಳೂರು, ಆಗಸ್ಟ್ 21, 2022 (www.justkannada.in): ರಾಜ್ಯದ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ಮೇಲ್ದರ್ಜೆಗೇರಿಸಲು 250 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಹಾಸ್ಟೆಲ್ ದುರಸ್ತಿಗೆ ಅಗತ್ಯವಿರುವ 150 ಕೋಟಿ ರೂ.ಗಳನ್ನು ಮತ್ತು ಇತರ ಕಾಮಗಾರಿಗಳಿಗೆ 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರವು ಈ ವರ್ಷ ಹಾಸ್ಟೆಲ್ ಗಳ ಸಾಮರ್ಥ್ಯವನ್ನು 25% ರಷ್ಟು ಹೆಚ್ಚಿಸಲಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಸಾಮರ್ಥ್ಯವನ್ನು 25% ರಷ್ಟು ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸರ್ಕಾರವು ತಲಾ 1,000 ವಿದ್ಯಾರ್ಥಿಗಳನ್ನು ಇರಿಸಬಹುದಾದ ಐದು ಹಾಸ್ಟೆಲ್ ಗಳನ್ನು ಸ್ಥಾಪಿಸುತ್ತಿದೆ. ‘ಮೈಸೂರು, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಈ ಹಾಸ್ಟೆಲ್ ಗಳು ತಲೆ ಎತ್ತುತ್ತಿವೆ ಎಂದು ಸಿಎಂ ತಿಳಿಸಿದ್ದಾರೆ.