ಧಾರವಾಡ,ನವೆಂಬರ್,7,2022(www.justkannada.in): ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕ್ಷಮೆ ಕೇಳುವಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಂದೂಗಳನ್ನ ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕವಾದಿ, ಹಿಂದೂ ವಿರೋಧಿಯಾಗಿದ್ದಾರೆ. ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ. ಈ ಬಗ್ಗೆ ಕ್ಷಮ ಕೇಳಲಿ ಎಂದು ಆಗ್ರಹಿಸಿದರು.
ಹಿಂದು ಶಬ್ದ ಪ್ರಾಚೀನ, ಪುರಾತನವಾದದ್ದು. ಕ್ರಿಸ್ತ ಪೂರ್ವದಿಂದಲೂ ಹಿಂದು ಶಬ್ದ ಇದೆ. ಹಿಂದೂ ಶಬ್ದಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಕುವೆಂಪುರವರ ನಾಡಗೀತೆಯಲ್ಲೇ ಹಿಂದೂ ಪದ ಇದೆ. ಹಿಂದೂ ಶಬ್ದ ಜಾತಿ ಸೂಚಕ ಅಲ್ಲ, ಮತ ಸೂಚಕ ಅಲ್ಲ ಎಂದರು.
Key words: Satish Jarakiholi- Controversial -Statement – Hindu – Pramod Muthalik