EXCLUSIVE: ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಸಿ.ಶಿಖಾ ಈಗ ಕೇಂದ್ರ ಸೇವೆಗೆ

Karnataka Cadre Senior IAS officers C Shikha, presently commissioner of commercial taxes Transfers to central services

 ಬೆಂಗಳೂರು, ನ.12,2024: (www.justkannada.in news) ಕರ್ನಾಟಕ ಕೆಡರ್‌ ನ  ಹಿರಿಯ ಐಎಎಸ್‌ ಅಧಿಕಾರಿ ಸಿ.ಶಿಖಾ ಕೇಂದ್ರ ಸೇವೆಗೆ ವರ್ಗಾವಣೆಗೊಂಡಿದ್ದಾರೆ. ಸದ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.

ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿರುವ ಸಿ.ಶಿಖಾ ಕೇಂದ್ರ ಸೇವೆಗೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.ಶಿಖಾ. ಈ ಸಂಬಂಧ ಆದೇಶ ಪ್ರಕಟ.

ಸಿ.ಶಿಖಾ ಹಿನ್ನೆಲೆ:

೨೦೦೪ ರ ಕರ್ನಾಟಕ ಕೆಡರ್‌ ನ ಐಎಎಸ್‌ ಅಧಿಕಾರಿ ಸಿ.ಶಿಖಾ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಅವರು ಈ ಹಿಂದೆ ಸೆಸ್ಕಾಂನ ಎಂ.ಡಿಯಾಗಿದ್ದರು. ಬಳಿಕ ಮೈಸೂರು ಜಿಲ್ಲಾಧಿಕಾರಿಯಾಗಿ ಕೆಲಕಾಲ ಸೇವೆ. ಆನಂತರ ಬೆಂಗಳೂರಿಗೆ ವರ್ಗ ಪಿಯು ಬೋರ್ಡ್‌ ನಿರ್ದೇಶಕಿ, ಬೆಸ್ಕಾಂ ಎಂಡಿ, ಬಿಎಂಟಿಸಿ ಎಂಡಿಯಾಗಿ ಕರ್ತವ್ಯ ನಿರ್ವಹಣೆ.

ಇದೀಗ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಸಿ.ಶಿಖಾ ಅವರನ್ನು ಕೇಂದ್ರ ಸೇವೆಗೆ ವರ್ಗ. ಸಿ.ಶಿಖಾ ಅವರ ಪತಿ ಅಜಯ್‌ ನಾಗಭೂಷಣ್‌ ಸಹ ಐಎಎಸ್‌ ಅಧಿಕಾರಿ.

ಬೀಳ್ಕೊಡುಗೆ ಸಮಾರಂಭ: 

ಹಿರಿಯ ಐಎಎಸ್‌ ಅಧಿಕಾರಿ ಸಿ.ಶಿಖಾ ಅವರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಈ ವೇಳೆ ಸಿ.ಶಿಖಾ ಅವರ ಕರ್ತವ್ಯ ಬದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಬ್ಬಂದಿ ಕೇಂದ್ರ ಸೇವೆಯಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ಹೆಸರುಗಳಿಸಲಿ ಎಂದು ಶುಭ ಹಾರೈಸಿದರು.

 

ದೂರು :

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ( ಇತ್ತೀಚೆಗಷ್ಟೆ “ಮುಡಾ” ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದವರು) ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವಿನ್ನು ಕೋರ್ಟ್‌ ನಲ್ಲಿ ವಿಚಾರಣೆ ಹಂತದಲ್ಲಿದೆ.

key words:  Karnataka Cadre, Senior IAS officer, C Shikha, commissioner of commercial taxes, Transfers to central services

SUMMARY:

C. Shikha, a senior IAS officer from the Karnataka cadre and currently serving as the commissioner of commercial taxes, has been transferred to a central government position.