ಶತ್ರು ಭೈರವಿ ಯಾಗ: ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿಕೆ

ಬೆಂಗಳೂರು, ಜೂನ್, 3,2024 (www.justkannada.in):   ನನ್ನ ಮತ್ತು ಸಿಎಂ ಮತ್ತು ಸರ್ಕಾರದ ವಿರುದ್ದ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ. ಯಾರು ನಡೆಸುತ್ತಿದ್ದಾರೆಂದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಕೇರಳದ ರಾಜರಾಜೇಶ್ವರಿ ದೇವಸ್ಥಾನ ಬಳಿ ದೊಡ್ಡ ಕುಟುಂಬದವರು ಮಾಟ ಮಂತ್ರ ಮಾಡಿಸಿದ್ದಾರೆಂದು ಹೇಳಿದ್ದಾರೆ. ಮಾಟ ಮಂತ್ರದ ಬಗ್ಗೆ ದಾಖಲೆ ಕೊಡುತ್ತೇವೆ ಅಂತಾರೆ. ಆದರೆ  ಕೇರಳ ಸರ್ಕಾರ ತನಿಖೆ ನಡೆಸಿ ಇಲ್ಲಿ ಯಾವ ಯಾಗವೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿ ಚೀಮಾರಿ ಹಾಕಿದೆ. ಕುರಿ ಕೋಳಿ ಹೊಡೆದ ಬಗ್ಗೆ ಎಸ್​​ಐಟಿ ರಚನೆ ಮಾಡಲಿ ಎಂದು ಲೇವಡಿ ಮಾಡಿದರು.

ಮಾಟ ಮಾಡಿಸಿರೋರು ರಾಜಕೀಯವಾಗಿ ದೊಡ್ಡ ಕುಟುಂಬ ಅಂತಾರೆ. ನಾನು ಕೇರಳಕ್ಕೆ ಹೋಗಿದ್ದು ಮಾಟ ಮಂತ್ರಕ್ಕೆ ಎಂದು ಹೇಳಿದ್ದಾರೆ. ನಾನು ನನ್ನ ಮೊಮ್ಮಗನ ಜೊತೆ ಕಾಲ ಕಳೆಯಲು ಹೋಗಿದ್ದೆ. ಗುಪ್ತಚರ ಮೂಲಕ ನನ್ನನ್ನು ಹುಡುಕುವ ಕೆಲಸ ಮಾಡಿದ್ರು. ಈ ವೇಳೆ ಅವರಿಗೆ ನಾನು ಕಬಿನಿಯಲ್ಲಿ ಇರೋ ವಿಚಾರ ಗೊತ್ತಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: Shatru Bhairavi Yaga, HDK, DK Shivakumar