ಮೈಸೂರು,ಸೆಪ್ಟಂಬರ್,21,2022(www.justkannada.in): ವಿದ್ಯಾವಂತರು ಐಸಿಸ್ ಸಂಘಟನೆ ಜತೆ ನಂಟು ಹೊಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಐಸಿಸ್ ಉಗ್ರರ ಜತೆ ಸಂಬಂಧ ಇಬ್ಬರ ಬಂಧನ ವಿಚಾರ ಕುರಿತು ಮಾತನಾಡಿದ ಬಿ.ವೈ. ವಿಜಯೇಂದ್ರ , ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಬೆಳವಣಿಗೆ ಕಂಡುಬಂದಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಇಂತಹ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಇಂಜಿನಿಯರಿಂಗ್ ಸೇರಿದಂತೆ ಉತ್ತಮ ವಿದ್ಯಾಭ್ಯಾಸ ಹೊಂದಿದವರು ಯುವಕರು ಐಸಿಸ್ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಈಗ ಶಿವಮೊಗ್ಗದಲ್ಲಿ ಬಂಧನ ಮಾಡುವುದಕ್ಕೆ ರಾಜ್ಯ ಪೋಲಿಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಕರ್ನಾಟಕ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ. ಶಾಂತಿ ವಾತಾವರಣ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು ಇರುವ ಜಾಗದಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಬೇಕು ಅಂತ ಕೇಳಿದ್ದರು. ಇಂತಹ ಓಲೈಕೆ ಮಾತುಗಳಿಂದ ಶಾಂತಿ ಕದಡುವ ವಾತಾವರಣ ನಿರ್ಮಾಣ ಆಗುತ್ತಿದೆ. ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಮಾತುಗಳು ಸಹಜ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
ಚುನಾವಣಾ ತಯಾರಿ ಇನ್ಮುಂದೆ ಶುರು ಮಾಡಬೇಕು. ನಾನು ಚುನಾವಣೆಗೆ ಎಲ್ಲೇ ಸ್ಪರ್ಧಿಸಿದರೂ ಹಳೇ ಮೈಸೂರು ಭಾಗವನ್ನು ನಾನು ಯಾವತ್ತೂ ಮರೆವುದಿಲ್ಲ.ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ಹಳೇ ಮೈಸೂರು ಮತ್ತು ವರುಣ ಕ್ಷೇತ್ರ. ಇಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ನಡೆಸುತ್ತೇನೆ ಎಂದು ಬಿವೈ ವಿಜಯೇಂದ್ರ ಹೇಳಿದರು.
Key words: shimogga- arrest-Suspected- terrorists-mysore-BY Vijayendra