ಬೆಂಗಳೂರು,ಡಿಸೆಂಬರ್,16,2020(www.justkannada.in): ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಕುರಿತು ರಾಜ್ಯದಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿದೆ. ಇನ್ನೂ ಕೆಲವರು ನಮ್ಮನ್ನ ಕರೆದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇದು ಕರೆಯೋದಲ್ಲ ಅವರೇ ಬಂದು ಸೇರ್ಪಡೆಯಾಗುವಂತಹ ಆಂದೋಲನ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ ಕೆ.ಎಸ್ ಈಶ್ವರಪ್ಪ ಪರೋಕ್ಷ ಟಾಂಗ್ ನೀಡಿದರು.
ಎಸ್ಟಿ ಮೀಸಲಿಗಾಗಿ ಬೃಹತ್ ಸಮಾವೇಶಕ್ಕೆ ಪ್ಲಾನ್ ಮಾಡಿದ್ದು ಈ ಹಿನ್ನೆಲೆ ಇಂದು ಪೂರ್ವಭಾವಿ ಸಭೆ ಕುರುಬ ಸಮುದಾದಯ ಪ್ರಮುಖ ನಾಯಕರ ಪೂರ್ವಭಾವಿ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಸಚಿವ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಈಶ್ವರಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕುರುಬ ಸಮುದಾಯದ ನಾಯಕರು, ಪದಾಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಸಚಿವ ಎಚ್ ಎಂ ರೇವಣ್ಣ, ಮಾಜಿ ಮೇಯರ್ ವೆಂಕಟೇಶ್, ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಸೇರಿ ಹಲವರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಬೇಡಿಕೆ ಗಮನ ತಂದಿದ್ದೇವೆ. ಕೇಂದ್ರದ ನಾಯಕರನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದೇವೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಕುರಿತು ರಾಜ್ಯದಲ್ಲಿ ದೊಡ್ಡ ಆಂದೋಲನವೇ ನಡೀತಿದೆ. ರಾಜ್ಯದಲ್ಲಿ ನಮ್ಮ ಆಂದೋಲನ ಜಾತ್ರೆ ರೂಪದಲ್ಲಿ ನಡೀತಿದೆ. ಇನ್ನೂ ಕೆಲವರು ನಮ್ಮನ್ನ ಕರೆದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇದು ಕರೆಯೋದಲ್ಲ ಅವರೇ ಬಂದು ಸೇರ್ಪಡೆಯಾಗುವಂಥ ಆಂದೋಲನ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.
ನಾವು ಸುಮ್ನೆ ಕೂತರೆ ಎಸ್ಟಿ ಮೀಸಲು ಸಿಗಲ್ಲ. ಕೇಂದ್ರ ಸರ್ಕಾರದ ಒಲವು ಗಳಿಸಿಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಗಮನಕ್ಕೆ ಬರುವ ರೀತಿಯಲ್ಲಿ ಆಂದೋಲನ ನಡೆಸಬೇಕು. ಯಾಕೆ ಕೆಲವರು ಬಂದಿಲ್ಲ ಅಂತ ನೋಡಲು ಹೋಗಬಾರದು. ಚರ್ಚೆಗಳು ಮಾಡುತ್ತಾ ಹೋದರೆ ಪ್ರಯೋಜನ ಇಲ್ಲ. ನಮ್ಮ ಉದ್ದೇಶ ಎಸ್ಟಿ ಮೀಸಲು ಪಡೆಯುವುದು. ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್ಟಿ ಮೀಸಲು ಪಡೆಯುವವರೆಗೂ ಹೋರಾಟ ನಿಲ್ಲಿಸೋದು ಬೇಡ ಎಂದರು.
Key words: ST- Reserve-kuruba community-Minister -KS Eshwarappa – indirect tong – Siddaramaiah.