ಬೆಂಗಳೂರು,ಫೆಬ್ರವರಿ,28,2023(www.justkannada.in): ನಾವು ಯಾವುದೇ ಸಂದಾನಕ್ಕೂ ಬಗ್ಗಲ್ಲ. ಸರ್ಕಾರ ಎಸ್ಮಾ ಜಾರಿ ಮಾಡಿದರೂ ಹೆದರಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದ್ರೆ ಮಾತ್ರ ನಾಳಿನ ಸರ್ಕಾರಿ ನೌಕರರ ಮುಷ್ಕರ ವಾಪಸ್ ಪಡೆಯುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಹೇಳಿದರು.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿ.ಎಸ್ ಷಡಾಕ್ಷರಿ, ನಾಳೆ ಎಲ್ಲಾ ಸರ್ಕಾರಿ ಸೇವೆಗಳು ಬಂದ್ ಆಗಲಿವೆ. ಬಜೆಟ್ ನಲ್ಲಿ 7ನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪ ಇಲ್ಲ. ನಾಳೆ ಸಾಮೂಹಿಕವಾಗಿ ಸರ್ಕಾರಿ ನೌಕರರು ಪ್ರತಿಭಟನೆ ಮಾಡುತ್ತೇವೆ. 1ವರ್ಷದಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಹೇಳ್ತಾನೆ ಇದ್ದಾರೆ. ಅದರೆ ಈವರೆಗೆ ಬೊಮ್ಮಾಯಿ ಭರವಸೆ ಈಡೇರಿಸಿಲ್ಲ. ನಮ್ಮ ಮನವಿಗೆ ರಾಜ್ಯ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
ಎಲ್ಲಾ ಸರ್ಕರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಮಾಡಬೇಕ. ನಾಳಿನ ಪ್ರತಿಭಟನೆಗೆ ಎಲ್ಲಾ ನೌಕರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಸಿ.ಎಸ್ ಷಡಾಕ್ಷರಿ, ನಾಳೆ ಎಲ್ಲಾಸರ್ಕಾರಿ ಕಚೇರಿಗಳು ಬಂಧ್ ಆಗುತ್ತೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಸ್ವಾಗತಿಸುತ್ತೇವೆ. 7ನೇ ವೇತನ ಆಯೋಗ ವರದಿ ಜಾರಿಯಾದ್ರೆ ಮಾತ್ರ ಮುಷ್ಕರ ವಾಪಸ್ ಪಡೆಯುತ್ತೇವೆ. ಯಾವುದೇ ಸಂಧಾನಕ್ಕೆ ಬಗ್ಗಲ್ಲ. ಸರ್ಕಾರ ಎಸ್ಮಾ ಜಾರಿ ಮಾಡಿದರೂ ನಾವು ಹೆದರಲ್ಲ. ನಮ್ಮನ್ನ ಜೈಲಿಗೆ ಕಳಿಸಿದ್ರೂ ನಾವು ಜಗ್ಗುವುದಿಲ್ಲ. ಲಕ್ಷಾಂತರ ಸರ್ಕಾರಿ ನೌಕರರು ಜೈಲಿಗೆ ಹೋಗಲಿ ಸಿದ್ದರಿದ್ದಾರೆ ಎಂದರು.
ಇಡೀ ದೇಶದಲ್ಲೇ ಕನಿಷ್ಟ ವೇತನ ಪಡೆಯುತ್ತಿರುವವರು ಕರ್ನಾಟಕ ಸರ್ಕಾರಿ ನೌಕರರು. ಬೇರೆ ರಾಜ್ಯಗಳಲ್ಲಿ ವೇತನ ಹೆಚ್ಚಿದೆ. ರಾಜ್ಯದಲ್ಲಿ ಶೇ 39ರಷ್ಟು ಹುದ್ದೆ ಖಾಲಿ ಇದೆ ಎಂದು ಸಿ.ಎಸ್ ಷಡಾಕ್ಷರಿ ತಿಳಿಸಿದರು.
Key words: Strike -7th Pay Commission- report -implement – CS Shadakshari.