ಬೆಳಗಾವಿ, ಜೂನ್, 26,2024 (www.justkannada.in): ರಾಜ್ಯದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ರೈತರಿಗೆ ಕೊಡುವ ಸಬ್ಸಿಡಿ ಮತ್ತು ಅನುದಾನವನ್ನೂ ಕೂಡ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂಧು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯಾವುದೇ ಸರ್ಕಾರ ಬಂದರೂ ಸಹ. ಅಭಿವೃದ್ಧಿ ಕೆಲಸ ಮಾಡಲು ದರ ಏರಿಕೆ ಸಹಜ. ರೈತರಿಗೆ ಕೊಡುವ ಸಬ್ಸಿಡಿ ಮತ್ತು ಅನುದಾನ ಕೂಡ ಏರಿಕೆ ಆಗುತ್ತದೆ. ಸರ್ಕಾರ ತೆರಿಗೆ ಹಾಕದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದರು.
ರಾಜ್ಯಕ್ಕೆ ಸರಿಯಾಗಿ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ. ಒಂದು ಲೀಟರ್ ಗೆ ಹೆಚ್ಚುವರಿಯಾಗಿ 50 ಎಂಎಲ್ ಹಾಲು ನೀಡುತ್ತಿರುವುದರಿಂದ 2 ರೂ. ಹೆಚ್ಚಳ ಮಾಡಲಾಗಿದೆ. ಅವೈಜ್ಞಾನಿಕವಾಗಿ ದರ ಏರಿಕೆ ಮಾಡಿದರೆ ತಪ್ಪು ಅಂತ ಪ್ರಶ್ನೆ ಮಾಡಬಹುದು. ಎಂದು ತಿಳಿಸಿದರು.
Key words: Subsidy, grants, farmers, Minister, Chaluvarayaswamy