ಮೈಸೂರು,ಫೆಬ್ರವರಿ,24,2022(www.justkannada.in): ಇದು ಸ್ಪರ್ಧಾತ್ಮಕ ಯುಗ, ಸ್ಪರ್ಧೆಗೆ ಇಳಿಯದಿದ್ದರೆ ಉಳಿಗಾಲವಿಲ್ಲ. ಸ್ಪರ್ಧೆಯನ್ನು ಧ್ಯೆಯವಾಗಿಸಿಕೊಂಡಿದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಾನಸ ಗಂಗೋತ್ರಿ ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ, ಸಿ.ಎಸ್.ಐ.ಆರ್., ಯುಜಿಸಿ ನೆಟ್ ತರಬೇತಿ ಕೇಂದ್ರ ಹಾಗೂ ಐ.ಕ್ಯು.ಎ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾವಲಂಬನೆಯತ್ತ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಿಸಲು ನಮಗೆ ಸಾಧ್ಯವಾಗಬೇಕೆಂದರೆ ಸತತವಾಗಿ ಸಾಧನೆಯಲ್ಲಿ ತೊಡಗುವುದು ಅನಿವಾರ್ಯ. ಒಂದು ದಿನ ಓದಿ ಒಂಭತ್ತು ದಿನ ಮಲಗಿ ನಿದ್ರಿಸಿದರೆ ಓದಿದಂತಲ್ಲ. ಇಂಥ ಬಡ ಓದಿನಿಂದ ಸ್ಪರ್ಧೆಗೆ ಬೇಕಾದ ಶಕ್ತಿ ಸಾಮರ್ಥ್ಯ ನಮಗೆ ಲಭಿಸುವುದಿಲ್ಲ. ಎಸ್.ಡಿ.ಸಿ. ಆಗಲೇಬೇಕೆಂದರೆ ಎಸ್.ಡಿ.ಸಿಗೆ ಸಾಕಾಗುವಷ್ಟು ಓದಬೇಕು, ಎಸ್.ಡಿ.ಸಿ ಗೆ ಕೆ.ಎ.ಎಸ್. ಗೆ ಸಾಕಾಗುವಷ್ಟು ಓದಬೇಕು, ಕೆ.ಎ.ಎಸ್ ಆಗಬೇಕೆಂದರೆ ಐ.ಎ.ಎಸ್ ಗೆ ಸಾಕಾಗುವಷ್ಟು ಓದಬೇಕು. ಸಾಧನೆ ಮಾಡಬೇಕು ಅಂದಾಗ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳುವಾಗ ಪುನರಾವರ್ತನೆ ಮಾಡಿದರೆ ಸಾಲದು. ಅದರ ಜೊತೆಗೆ ಸತತ ಅಭ್ಯಾಸವನ್ನು ರೂಢಿಸಿಕೊಳ್ಳುವುದು. ಒಂದು ವಿಷಯವನ್ನು ಒಂದೆರಡು ಬಾರಿ ಅಧ್ಯಯನ ಮಾಡುವ ಬದಲು ಸಮಯ ಸಿಕ್ಕಾಗಲೆಲ್ಲ ಹೆಚ್ಚೆಚ್ಚು ಅಧ್ಯಯನ ನಡೆಸಿದಾಗ ಮಾತ್ರ ಓದಿನಲ್ಲಿ ಇನ್ನಷ್ಟು ಪಕ್ವತೆಯನ್ನು ಕಂಡುಕೊಳ್ಳಬಹುದು. ಹಿಂದಿಗಿಂತ ಇಂದು ಸಾಧನೆ ಮಾಡಲು ಅವಕಾಶಗಳು ಸಾಕಷ್ಟಿವೆ. ಗ್ರಂಥಾಲಯ ಸೌಲಭ್ಯ, ಸುಲಭವಾಗಿ ದೊರೆಯುವ ಮಾಹಿತಿ ತಂತ್ರಜ್ಞಾನ, ತರಬೇತಿ ಕೇಂದ್ರಗಳು, ವಸತಿನಿಲಯ ಸೌಕರ್ಯ.. ಹೀಗೆ ಅವಕಾಶಗಳ ಬಾಗಿಲು ತೆರೆದಿವೆ. ಇದನ್ನು ಬಳಸಿಕೊಂಡು ಶ್ರಮವಹಿಸಿ, ಅವಕಾಶಗಳ ಯೋಜಿತವಾಗಿ ಗುರಿಯತ್ತ ದೃಢವಾದ ಹೆಜ್ಜೆ ಇಡುತ್ತಾ ಏಕಾಗ್ರ ಚಿತ್ತದಿಂದ ಮುಂದೆ ಸಾಗಿದರೆ ಗುರಿ ಸೇರುವುದು ನಿಶ್ಚಿತ ಎಂದರು.
ಯಾವುದೇ ವಿಷಯದಲ್ಲಿ, ಗುರಿಯನ್ನು ಸಾಧಿಸಬೇಕಾದರೆ, ಮೊದಲು ಗುರಿಯನ್ನ ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮಗ್ನತೆಯನ್ನು ಕಾಣಬೇಕಾಗುತ್ತದೆ. ನಮ್ಮ ಜೀವನದ ಉದ್ದೇಶವೇನು ಎಂಬುದರ ಬಗ್ಗೆ ನಿಖರವಾದ ಧ್ಯೆಯವನ್ನು ಇಟ್ಟುಕೊಂಡು ಜೀವನದ ಯಶಸ್ಸಿಗಾಗಿ ಗುರಿಯನ್ನು ತಲುಪುವಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗುತ್ತದೆ. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಸಾಧನೆಯ ಹಾದಿಯಲ್ಲಿ ಸೋಲು ಸಾಮಾನ್ಯ. ಹಾಗಂತ ಕೊರಗಬೇಕಿಲ್ಲ ಮರಳಿ ಯತ್ನವ ಮಾಡಿದರೆ ಗೆಲುವು ನಿಶ್ಚಿತ ಎಂದು ಹೇಳಿದರು.
ಕಾರ್ಯಾಗಾರದ ಉದ್ಘಾಟನೆಯನ್ನು ಉಪ ಪೊಲೀಸ್ ಆಯುಕ್ತ ಪ್ರದೀಪ್ ಗುಂಟಿ ನೆರವೇರಿಸಿದರು. ವಿವಿ ಆಡಳಿತಾಧಿಕಾರಿ ಪ್ರೊ. ಪಿ. ಮಾದೇಶ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ ಡಾ.ಎಸ್.ಟಿ. ರಾಮಚಂದ್ರ , ಐ.ಕ್ಯು.ಎ.ಸಿ ನಿರ್ದೇಶಕ ಪ್ರೊ. ಎನ್.ಎಸ್. ಹರಿನಾರಾಯಣ, ಕರ್ನಾಟಕ ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ ಪಾಲ್ಗೊಂಡಿದ್ದರು. ಗೋಷ್ಠಿಯಲ್ಲಿ ಬೆಂಗಳೂರಿನ ಸಬ್ ಇನ್ಸ್‌ಪೆಕ್ಟರ್ ಲಾಲ್ ಸಾಬ್ ರಫೀಕ್ ಹಾಗೂ ಹುಸೇನಪ್ಪ ನಾಯಕ್, ಬೆಂಗಳೂರಿನ ಯು.ಪಿ.ಎಸ್.ಸಿ. ಮೆಂಟರ್ ಸುದರ್ಶನ್ ಎನ್.ಆರ್. ವಿಷಯ ಮಂಡಿಸಿದರು.
Key words: Success-competition-Prof.G.Hemanth Kumar
ENGLISH SUMMARY…
Youth can achieve success if they make competition as their mission: UoM VC
Mysuru, February 24, 2022 (www.justkannada.in): “This is a competitive world, if you won’t compete you cannot survive. You can get success if you develop the courage to take part in competitions,” opined Prof. G. Hemanth Kumar, Vice-Chancellor, University of Mysore.
He inaugurated a one-day free workshop organized by the Dalit Students Federation, in association with the CISR, UGC Net, and IQAC, held at the Nalwadi Krishnaraja Wadiyar auditorium in Senate Bhavan, Manasagangotri campus.
“Continuous participation is inevitable to compete. If you read just for one day and sleep for nine days you cannot learn. That kind of study won’t develop the capacity you required for competition. If you want to become an SDC you should prepare for that, if you want to become an FDC you should make preparations required for KAS if you want to become a KAS officer you should prepare for IAS exams. You can reach your goal only when you think of achievement,” he said.
Mysuru City Deputy Police Commissioner Pradeep Gunti inaugurated the workshop. Prof. P. Madesh, Special Officer, University of Mysore, Dr. S.T. Ramachandra, Director, Student Welfare Directorate, Prof. N.S. Harinarayana, Director, IQAC, S. Maridevaiah, President, Karnataka State Researchers Association participated in the program. Lalsab Rafeek, Sub Inspector, Bengaluru, and Husenappa Nayak, Bengaluru, and UPSC mentor Sudarshan N.R., participated as the resource persons.
Keywords: University of Mysore/ Prof. G. Hemanth Kumar/ workshop