ಬೆಂಗಳೂರು,ಆ,8,2020(www.justkannada.in): ಕೋವಿಡ್ 19 ಡ್ಯೂಟಿಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ವೈದ್ಯರಾಗಲಿ ನಿರ್ಲಕ್ಷ ತೋರಿದರೂ ಕೂಡಲೇ ಅಮಾನತು ಮಾಡಿ ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸೂಚನೆ ನೀಡಿದರು.
ಕೋವಿಡ್ 19 ಸೊಂಕು ತಡೆ ಹಿನ್ನೆಲೆ ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜ್ ಅವರು ಇಂದು ಬೆಳಿಗ್ಗೆ ಪ್ರಗತಿ ಪರಿಶೀಲನ ಸಭೆ ನಡೆಸಿ ವೈದ್ಯರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಹದೇವಪುರ ಬಿಬಿಎಂಪಿ ವಲಯ ಉಸ್ತುವಾರಿ ಶ್ರೀ ಬಿ.ಎ ಬಸವರಾಜ ಅವರು ಕೊರೋನಾ ಸೋಂಕು ತಡೆ ಸಂಬಂದ ಇಂದು 6 ನೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಕೋವಿಡ್ 19 ಡ್ಯೂಟಿಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ವೈದ್ಯರಾಗಲಿ ನಿರ್ಲಕ್ಷ ತೋರಿದರೂ ಕೂಡಲೆ ಅಮಾನತ್ತುಗೊಳಿಸುವಂತೆ ಸೂಚನೆ ನೀಡಿದರು. ಸೂಕ್ತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಮುಂದಿನ ಸಭೆಯಲ್ಲಿ ಸೋಂಕು ಪ್ರಮಾಣ ಕಡಿಮೆ ಮಾಡಲೇ ಬೇಕೆಂದು ಸೂಚನೆ ನೀಡಿದರು. ಕೊರೋನಾ ಸೊಂಕಿತರಾಗಲಿ, ಪ್ರೈಮರಿ ಕಾಂಟೆಕ್ಟ್ ಗಳಾಗಲಿ ರಸ್ತೆಗಿಳಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಕೋವಿಡ್ – 19 ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡಬೇಕು ಹಾಗೆಯೇ ವಾರ್ಡ್ ಒಂದರಲ್ಲಿ ಪ್ರತಿ ದಿನ 150 ಸ್ವಾಬ್ ಟೆಸ್ಟ್ ಮಾಡಲೇ ಬೇಕು ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ದೊಡ್ಡನಕ್ಕುಂದಿ, ರಾಮಮೂರ್ತಿ ನಗರ, ಬೆಳ್ಳಂದೂರು, ಸೇರಿದಂತೆ ಹಲವೆಡೆ ವೈಧ್ಯರು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಸಚಿವರೊಂದಿಗೆ ತಮ್ಮ ಅಳಲು ತೋಡಿಕೊಂಡರು. ಪಾಲಿಕೆ ಸದಸ್ಯರ ಅಳಲಿಗೆ ಸ್ಪಂದಿಸಿದ ಸಚಿವ ಬಸವರಾಜ್ ಅಂತಹ ಅಧಿಕಾರಿಗಳ ವಿರುದ್ದ ಕೂಡಲೆ ಕ್ರಮಕ್ಕೆ ಸೂಚಿಸಿದರು.
ಮಾರತ್ ಹಳ್ಳಿ ವಾರ್ಡ್ ಪಾಲಿಕೆ ಸದಸ್ಯ ರಮೇಶ್ ಮಾತನಾಡಿ ನಮ್ಮ ವಾರ್ಡ್ ನಲ್ಲಿ ಅತಿ ಹೆಚ್ಚು ಬಡವರಿದ್ದು ಸರ್ಕಾರದಿಂದ ಸಿಗುತ್ತಿರುವ ಪಡಿತರ ದಾನ್ಯ ಸಾಕಾಗುತ್ತಿಲ್ಲ ಹಾಗಾಗಿ ಇನ್ನು ಹೆಚ್ಚು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು.
ಬೆಳ್ಳಂದೂರು ಮತ್ತು ಹೊರಮಾವು ವಾರ್ಡ್ ನಲ್ಲಿ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ ಕೂಡಲೆ ಕಡಿಮೆ ಆಗಲು ಶ್ರಮಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಐಎಎಸ್ ಅಧಿಕಾರಿ ಡಾ. ಮಂಜುಳಾ, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್,ಡಿಸಿಪಿ ದೇವರಾಜ್, ಜಂಟಿ ಆಯುಕ್ತ ವೆಂಕಟಾಚಲಪತಿ, ತಹಶೀಲ್ದಾರ್ ತೇಜಸ್ ಕುಮಾರ್ ಸೇರಿದಂತೆ ಹಲ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Key words: suspension -officer – doctor – negligence – Kovid-19-Minister -Bhairati Basavaraju