ಹೈದರಾಬಾದ್, ಸೆ.15, 2019 : ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಿವಾಸದಲ್ಲಿ ಸಾಕು ನಾಯಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಶು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ 11 ತಿಂಗಳ ಸಾಕು ನಾಯಿ ‘ಹಾಸ್ಕಿ‘ ಅನಾರೋಗ್ಯದಿಂದ ಬಳಲುತ್ತಿತ್ತು. ಇದನ್ನು ಪೋಷಣೆ ಮಾಡುವ ಮುಖ್ಯಮಂತ್ರಿಗಳ ಸಿಬ್ಬಂದಿ ಖಾಸಗಿ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರು ಇಂಜಕ್ಷನ್ ನೀಡಿದ ಕೆಲವೇ ಗಂಟೆಗಳಲ್ಲಿ ಹಾಸ್ಕಿ ಸಾವನ್ನಪಿದೆ.
ವೈದ್ಯರ ನಿರ್ಲಕ್ಷ್ಯದಿಂದ ಹಾಸ್ಕಿ ಸಾವನ್ನಪಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿಬ್ಬಂದಿ, ಐಪಿಸಿ ಸೆಕ್ಷನ್ 429 ಮತ್ತು ಪ್ರಾಣಿ ಹತ್ಯೆ ತಡೆ ಕಾಯ್ದೆ 11(4) ರ ಅಡಿಯಲ್ಲಿ ವೈದ್ಯರಾದ ಲಕ್ಷ್ಮಿ ಮತ್ತು ರಂಜಿತ್ ವಿರುದ್ಧ ಇಲ್ಲಿನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಜೆಪಿಟೀಕೆ :
ವೈದ್ಯರ ವಿರುದ್ಧ ದೂರು ದಾಖಲಿಸಿರುವುದನ್ನು ವಿರೋಧ ಪಕ್ಷ ಬಿಜೆಪಿ ಖಂಡಿಸಿದೆ. ತೆಲಂಗಾಣದಲ್ಲಿ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ, ಸಾಕು ನಾಯಿ ಮೇಲೆ ತೋರಿಸಿದ ಪ್ರೀತಿಯಲ್ಲಿ ಅರ್ಧದಷ್ಟು ಜನರ ಮೇಲೆ ತೋರಿಸಿದ್ದಾರೆ ಸಾಕಷ್ಟು ಜನರು ಡೆಂಗ್ಯೂ ಪೀಡಿತರಾಗುತ್ತಿರಲಿಲ್ಲ ಎಂದು ಬಿಜೆಪಿಯ ವಕ್ತಾರ ಕೆ. ಕೃಷ್ಣ ಸಾಗರ್ ರಾವ್ ತಿಳಿಸಿದ್ದಾರೆ.
key words : telangana-cm-house-pet-dog-died-complaint-against-vet.doctors-police