ರೇವ್ ಪಾರ್ಟಿ ಪ್ರಕರಣ:  ತೆಲುಗು ನಟಿ ಹೇಮಾ ಬಂಧನ

ಬೆಂಗಳೂರು,ಜೂನ್,3,2024 (www.justkannada.in): ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೇ 20 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿಲಾಗಿತ್ತು. ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿಯಾಗಿದ್ದು ಇಂದು ಸಿಸಿಬಿ ವಿಚಾರಣೆಗೆ ನಟಿ ಹೇಮಾ ಅವರು ಹಾಜರಾಗಿದ್ದರು.  ವಿಚಾರಣೆ ವೇಳೆ ಸಮರ್ಪಕ  ಉತ್ತರ ನೀಡದ ಹಿನ್ನೆಲೆ ನಟಿ ಹೇಮಾರನ್ನ  ಬಂಧನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.   ನಾಳೆ ಬೆಳಗ್ಗೆ ನ್ಯಾಯಾಲಯದ ಮುಂದೆ ಸಿಸಿಬಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.

Key words: Telugu, actress, Hema, arrested